ಸೆ.2ಕ್ಕೆ ಜಾಗ್ವಾರ್ ಆಡಿಯೋ ಬಿಡುಗಡೆ

Spread the love

Jaguar

ಮಂಡ್ಯ, ಆ.9-  ನಟ ನಿಖಿಲ್‍ಕುಮಾರ್ ಅಭಿನಯದ ಬಹುಕೋಟಿ ವೆಚ್ಚದ ಭಾರೀ ಮಹತ್ವಾಕಾಂಕ್ಷೆ ನಿರೀಕ್ಷೆಯುಳ್ಳ ಜಾಗ್ವಾರ್ ಚಲನಚಿತ್ರದ ಆಡಿಯೋ ಬಿಡುಗಡೆ  ಸೆ.2ರಂದು ಮಾಡಲಾಗುವುದು ಎಂದು ಚಿತ್ರದ ನಿರ್ಮಾಪಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದರು.  ಕಾರ್ಯಕ್ರಮದ ಸಂಬಂಧ ಪೂರ್ವಭಾವಿ ವ್ಯವಸ್ಥೆಗಳನ್ನು ವೀಕ್ಷಿಸಲು ನಗರಕ್ಕೆ ಆಗಮಿಸಿದ್ದ ಕುಮಾರಸ್ವಾಮಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಅಂದು ಸಂಜೆ ಮಂಡ್ಯದ ಸರ್‍ಎಂವಿ ಕ್ರೀಡಾಂಗಣದಲ್ಲಿ ಜಾಗ್ವಾರ್ ಚಿತ್ರದ ಆಡಿಯೋ ಬಿಡುಗಡೆ ಮಾಡುವುದಾಗಿ ಹೇಳಿದರು.  ಈ ಸಮಾರಂಭಕ್ಕೆ ಲಕ್ಷಾಂತರ ಜನ ಸೇರುವ ನಿರೀಕ್ಷೆ ಇದ್ದು, ಹಲವು ಗಣ್ಯರು, ಚಿತ್ರರಂಗದ ಬಹುತೇಕರು ಪಾಲ್ಗೊಳ್ಳಳಿದ್ದಾರೆ ಎಂದರು. ಜೆಡಿಎಸ್ ಸಂಸದ ಸಿ.ಎಸ್.ಪುಟ್ಟರಾಜು, ವಿಧಾನಪರಿಷತ್ ಸದಸ್ಯ ಎಂ.ಶ್ರೀನಿವಾಸ್ ಮತ್ತಿತರರು ಜತೆಗಿದ್ದರು.

Facebook Comments

Sri Raghav

Admin