ಸೇನೆಯ ಸೇವೆಗೆ ಸೇರಲಿವೆ ಮುಧೋಳ ಶ್ವಾನಗಳು

Mudhol--02

ಡೆಹ್ರಾಡೂನ್, ನ.2-ವೈರಿಗಳ ಬೇಟೆಗೆ ಹೆಸರಾದ ಕರ್ನಾಟಕದ ಬಾಗಲಕೋಟೆ ಜಿಲ್ಲೆ ಮುಧೋಳದ ಬೇಟೆ ನಾಯಿಗಳು ಇದೇ ಮೊಟ್ಟ ಮೊದಲ ಬಾರಿಗೆ ಸೇನೆ ಸೇವೆಗೆ ಸೇರ್ಪಡೆಯಾಗಲಿವೆ. ಜರ್ಮನ್ ಶೆಫರ್ಡ್, ಲ್ಯಾಬ್ರಡೋರ್ಸ್ ಮತ್ತು ಗ್ರೇಟ್ ಸ್ವಿಸ್ಟೆ ಮೌಂಟೇನ್ -ಈ ವಿದೇಶಿ ನಾಯಿಗಳಿಂದ ತುಂಬಿರುವ ಭಾರತೀಯ ಸೇನೆಗೆ ಪ್ರಪ್ರಥಮ ಬಾರಿ ದೇಶಿಯ ಶ್ವಾನ ತಳಿ ಸೇರ್ಪಡೆಯಾಗುತ್ತಿರುವುದು ಕರ್ನಾಟಕಕ್ಕೆ ಹೆಮ್ಮೆಯ ಸಂಗತಿಯಾಗಿದೆ.

ಆರು ಮುಧೋಳ ಶ್ವಾನಗಳಿಗೆ ವಿಶೇಷ ತರಬೇತಿ ನೀಡಲಾಗಿದ್ದು, ಈ ವರ್ಷದ ಕೊನೆಗೆ ಇವು ಸೇನೆಗೆ ಸೇರಲಿವೆ. ಭಯೋತ್ಪಾದಕರ ಉಪಟಳ ಹೆಚ್ಚಾಗಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆಯಲ್ಲಿ ಇವು ನೆರವಾಗಲಿವೆ. ಕರ್ನಾಟಕದಿಂದ ಈ ಆರು ಶ್ವಾನಗಳನ್ನು ಆರ್‍ವಿಸಿ ಕೇಂದ್ರಕ್ಕೆ ತರಬೇತಿಗಾಗಿ ಕಳುಹಿಸಲಾಗಿತ್ತು. ಇವುಗಳಿಗೆ ತೀವ್ರ ತರಬೇತಿ ನೀಡಲಾಗುತ್ತಿದೆ. ಮುಧೋಳ ಹೌಂಡ್ಸ್ ಶ್ವಾನ ತಳಿ ವೇಗ, ನಿಖರತೆ, ಶತ್ರುಗಳ ಮೇಲೆ ಆಕ್ರಮಣದಿಂದಾಗಿ ವಿಶೇಷ ಗಮನ ಸೆಳೆದಿವೆ. ಎತ್ತರ ಮತ್ತು ಗಾತ್ರದಿಂದಲೂ ವಿಶಿಷ್ಟ ಪ್ರಾಣಿ ಎನಿಸಿಕೊಂಡಿರುವ ಇವು ಸ್ವಾಮಿನಿಷ್ಠೆಗೆ ಹೆಸರಾದ ಶ್ವಾನ.

Sri Raghav

Admin