ಸೋನು ನಿಗಮ್ ಬಾಂಗ್ ವಿವಾದಿತ ಹೇಳಿಕೆ ಕುರಿತು ಯೋಗೇಶ್ ಮಾಸ್ಟರ್ ಹೇಳಿದ್ದೇನು..?

Sonu-Nigama--01

ಚಿಕ್ಕಮಗಳೂರು, ಏ.20- ಗಾಯಕ ಸೋನು ನಿಗಮ್ ಅವರ ವಿವಾದಿತ ಹೇಳಿಕೆ ಖಂಡಿಸಿ ನಿರ್ದೇಶಕ ಹಾಗೂ ರಂಗಕರ್ಮಿ ಯೋಗೇಶ್ ಮಾಸ್ಟರ್ ಪ್ರತಿಕ್ರಿಯಿಸಿ ಬಾಂಗ್ (ಪ್ರಾರ್ಥನೆ) ಕಿರಿಕಿರಿ ಉಂಟುಮಾಡಿದರೆ ಕಿರು ಪ್ರಾರ್ಥನೆ ಸಮಸ್ಯೆಯಲ್ಲ. ಅದು ನಿಮ್ಮ ಮನಸ್ಸಿನಲ್ಲಿರುವ ಪೂರ್ವಾಗ್ರಹ ಪೀಡಿತ ಸಮಸ್ಯೆ. ಪ್ರಾರ್ಥನೆ ಎಲ್ಲರಿಗೂ ಅಲರಾಂ ಇದ್ದಂತೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ ಬೇಗ ಏಳಲು ಎಚ್ಚರಿಕೆ ಗಂಟೆ ಇಡುತ್ತೇವೆ. ಹೀಗಾಗಿ ಬಾಂಗ್ ಕೂಗಬಾರದು ಅಂದರೆ ಹೇಗೆ. ಮಸೀದಿ, ದೇವಸ್ಥಾನ ಪಕ್ಕ ಮನೆಗಳಿದ್ದರೆ ಗಂಟೆಗಳ ಸದ್ದು ಅಥವಾ ಪ್ರಾರ್ಥನೆ ಶಬ್ದ ಬರುವುದು ಸಹಜ ಎಂದು ತಿಳಿಸಿದರು.ಮರಳು ಮನೆಗೆ ಎಂಬ ಚಲನಚಿತ್ರ ಮೇ 5ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಇದನ್ನು ಎಲ್ಲರೂ ಪ್ರೋತ್ಸಾಹಿಸಬೇಕು ಎಂದರು.  ಇತ್ತೀಚೆಗಷ್ಟೆ ದಾವಣಗೆರೆಯಲ್ಲಿ ನನ್ನ ಮೇಲೆ ಹಲ್ಲೆ ಮಾಡಿದ ಹುಡುಗರ ಬಗ್ಗೆ ಆಕ್ರೋಶ ಬರಲು ಅನುಕಂಪವಿದೆ. ಯಾರ ಮಾತನ್ನು ಕೇಳಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದರು. ತ್ರಿವಳಿ ತಲಾಕ್ ದುರ್ಬಳಕೆಗೆ ಅವಕಾಶ ನೀಡಬಾರದು. ಯಾವುದೇ ಮುಸ್ಲಿಂ ವ್ಯಕ್ತಿ ತಲಾಕ್‍ನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳಬಾರದು. ಕೇವಲ ಹೆಣ್ಣು ಮಗು ಹುಟ್ಟಿದ ಕಾರಣಕ್ಕೆ ತಲಾಕ್ ನೀಡುವ ನಿದರ್ಶನಗಳು ಸಾಕಷ್ಟಿವೆ. ಇಂತಹ ಘಟನೆ ತಡೆಯಬೇಕು ಎಂದು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin