ಸೋಮಾಲಿಯಾ ಕಡಲ್ಗಳ್ಳರಿಂದ ಭಾರತೀಯ ನೌಕೆ ಹೈಜಾಕ್

Spread the love

Somalia--01

ಮುಂಬೈ, ಏ.3- ಸಾಗರದಲ್ಲಿ ಕಡಲ್ಗಳ್ಳತನ ಕೃತ್ಯಗಳಿಂದ ವಿಶ್ವದ ಅನೇಕ ದೇಶಗಳಿಗೆ ತಲೆನೋವಾಗಿ ಪರಿಣಮಿಸಿರುವ ಸೋಮಾಲಿಯಾ ಕಡಲ್ಗಳ್ಳರು ಈಗ ಭಾರತೀಯ ಸರಕು ಸಾಗಣೆ ನೌಕೆಯನ್ನು ಅಪಹರಿಸಿ ಆತಂಕ ಸೃಷ್ಟಿಸಿದ್ದಾರೆ. ದುಬೈನಿಂದ ಯೆಮೆನ್‍ಗೆ ತೆರಳುತ್ತಿದ್ದ ಭಾರತದ ಅಲ್-ಕೌಶರ್ ಎಂಬ ಕಾರ್ಗೊ ಹಡಗಿನ ಮೇಲೆ ದಾಳಿ ನಡೆಸಿ ಸೋಮಾಲಿ ಬಂಡುಕೋರರು ನೌಕೆಯಲ್ಲಿದ್ದ 11 ಸಿಬ್ಬಂದಿಯನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದಾರೆ. ಹಡಗನ್ನು ಹೈಜಾಕ್ ಮಾಡಿರುವ ಕಡಲ್ಗಳ್ಳರು ತಮ್ಮ ಬೇಡಿಕೆಗಳ ಬಗ್ಗೆ ಈವರೆಗೆ ತಿಳಿಸಿಲ್ಲ. ಈ ನೌಕೆಯು ಮುಂಬೈನ ಮಾಂಡೋವಿಗೆ ಸೇರಿದ್ದಾಗಿದೆ.

ಸಾಗರ ಪ್ರದೇಶಗಳಲ್ಲಿ ಆಗಾಗ ದಾಳಿ ನಡೆಸಿ ಪ್ರಯಾಣಿಕರ ಮತ್ತು ಸರಕು ಸಾಗಣೆ ಹಡಗುಗಳನ್ನು ಹೈಜಾಕ್ ಮಾಡುವ ಕಡಲ್ಗಳ್ಳರು ಕ್ರೂರಿಗಳಾಗಿದ್ದು, ತಮ್ಮ ಬೇಡಿಕೆ ಈಡೇರಿಕೆಗಾಗಿ ಯಾವುದೇ ಹೀನ ಕೃತ್ಯಕ್ಕೂ ಹಿಂದುಮುಂದು ನೋಡುವವರಲ್ಲ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಯೆಮೆನ್‍ನ ರಾಜತಾಂತ್ರಿಕ ಉನ್ನತಾಧಿಕಾರಿಗಳನ್ನು ಈಗಾಗಲೇ ದೂರವಾಣಿ ಮೂಲಕ ಸಂಪರ್ಕಿಸಿದ್ದು, 11 ಭಾರತೀಯ ಸಿಬ್ಬಂದಿ ಮತ್ತು ನೌಕೆಯ ಸುರಕ್ಷಿತ ಬಿಡುಗಡೆಗಾಗಿ ಅಗತ್ಯವಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin