ಸೌಕರ್ಯ ನೀಡಿದರೆ ನಮ್ಮ ಕ್ರೀಡಾಪಟುಗಳು ಹೆಚ್ಚಿನ ಪದಕ ಪಡೆಯುತ್ತಾರೆ

Spread the love

BELAGAM3

ರಾಯಬಾಗ,ಆ.30- ನಮ್ಮ ದೇಶದ ಹೆಮ್ಮೆಯ ಪುತ್ರಿ ಸಾಕ್ಷಿ ಮಲ್ಲಿಕ್ ಅಂತರರಾಷ್ಟ್ರೀಯ ಮಟ್ಟದ ಒಲಿಂಪಿಕ್ಸ್ ಆಟದಲ್ಲಿ ಕಂಚಿನ ಪದಕ ಪಡೆದು ಕುಸ್ತಿ ದೇಶದಲ್ಲಿ ಇನ್ನು ಜೀವಂತವಾಗಿದೆ ಎಂದು ತೋರಿಸಿಕೊಟ್ಟಿದ್ದಾರೆ. ಸರಕಾರ ದೇಶಿ ಕ್ರೀಡೆಗಳಿಗೆ ಇನ್ನು ಹೆಚ್ಚಿನ   ಪ್ರೊ ತ್ಸಾಹ ಮತ್ತು ಸಹಾಯ, ಸೌಕರ್ಯ ನೀಡಿದರೆ ಒಲಿಂಪಿಕ್ಸ್‍ನಲ್ಲಿ ನಮ್ಮ ಕ್ರೀಡಾಪಟುಗಳು ಇನ್ನು ಹೆಚ್ಚಿನ ಪದಕ ಪಡೆಯುತ್ತಾರೆ ಎಂದು ಡಿಕೆಎಸ್‍ಎಸ್‍ಕೆ ಉಪಾಧ್ಯಕ್ಷ ಭರತೇಶ ಬನವಣೆ ಹೇಳಿದರು.

ನಿನ್ನೆ ಸಾಯಂಕಾಲ ತಾಲೂಕಿನ ನಸಲಾಪೂರ ಗ್ರಾಮದಲ್ಲಿ ಶ್ರೀ ಹೊನ್ನಮ್ಮಾದೇವಿ ಜಾತ್ರೆ  ಅಂಗವಾಗಿ ಹಮ್ಮಿಕೊಂಡಿದ್ದ ನಿಕಾಲಿ ಜಂಗೀ ಕುಸ್ತಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ ಮಹಾರಾಜರು ಪೋಷಿಸಿ ಬೆಳೆಸಿದ ಕುಸ್ತಿಯಂತಹ ದೇಶಿ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಆರೋಗ್ಯದ ಜೊತೆ ಮಾನಸಿಕ ಆರೋಗ್ಯ ಕೂಡ ಹೊಂದಬಹುದು ಎಂದರು.ಇಂದಿನ ಆಧುನಿಕ ಜೀವನದಲ್ಲಿ ಯುವ ಜನರು ಕ್ರಿಕೆಟ್, ಮೊಬೈಲ್, ಟಿ.ವಿಗಳತ್ತ ಹೆಚ್ಚು ಆಕರ್ಷಿತರಾಗಿ, ಅವುಗಳಿಗೆ ಹೆಚ್ಚಿನ ಸಮಯ ನೀಡುತ್ತಿರು ವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಬಲಹೀನರಾಗುತ್ತಿದ್ದಾರೆ.

ಇಂದು ಕುಸ್ತಿ ಕಲಿಸುವ ಗರಡಿ ಮನೆಗಳು ಕಣ್ಮರೆಯಾಗುತ್ತಿರುವುದು ತುಂಬಾ ಶೋಚನೀಯ ವಿಷಯವಾಗಿದೆ. ಗ್ರಾಮೀಣ ಭಾಗದ ಕ್ರೀಡೆಗಳನ್ನು ಉಳಿಸಿ ಬೆಳೆಸಲು ಎಲ್ಲರೂ ಕೂಡಿ ಪ್ರಯತ್ನಿಸಬೇಕಾಗಿರುವುದು ಇಂದು ಬಹಳ ಮುಖ್ಯವಾಗಿದೆ ಎಂದರು. ಇಂದು ಜರುಗಿದ ಕುಸ್ತಿ ಪಂದ್ಯಗಳಲ್ಲಿ ರಾಯಬಾಗ, ಚಿಕ್ಕೋಡಿ ತಾಲೂಕಿನ ಹಾಗೂ ನೆರೆಯ ಮಹಾರಾಷ್ಟ್ರದ ಕುಸ್ತಿ ಪಟುಗಳು ಭಾಗವಹಿಸಿದ್ದರು. ಕುಸ್ತಿ ಪಟುಗಳ ಸೆಣಸಾಟವು ನೋಡಲು ಆಗಮಿಸಿದ್ದ ಗ್ರಾಮದ ಸುತ್ತ ಮುತ್ತಲಿನ ಜನರನ್ನು ರೋಮಾಂಚನಗೊಳಿಸಿತು. ಯುವಕರು ಕುಸ್ತಿ ನೋಡಿ ಕೇಕೇ, ಸಿಳ್ಳೆಗಳನ್ನು ಹೊಡೆಯುತ್ತಿರುವುದು ಕುಸ್ತಿ ಪಂದ್ಯದ ಮೈದಾನದ ಸುತ್ತ ಕಂಡುಬಂದಿತು.

ಪಾರೀಶ ಉಗಾರೆ, ಮಾಜಿ ಶಾಸಕ ಕಲ್ಲಪ್ಪ ಮಾಗೆನ್ನವರ, ನ್ಯಾಯವಾದಿ ಗಳಾದ ಡಿ.ಜೆ. ಗುಂಡೆ, ಎಸ್.ಟಿ. ಮುನ್ನೊಳ್ಳಿ, ಎಮ್.ಕೆ. ಖೊಂಬಾರೆ, ಗ್ರಾ.ಪಂ. ಅಧ್ಯಕ್ಷ ಬಾಳಾಸಾಹೇಬ ಸಮಾಜೆ, ಜಯಪಾಲ ಬನವಣೆ, ತಾ.ಪಂ.ಸದಸ್ಯ ಚೌಗೌಡಾ ಪಾಟೀಲ, ಶ್ರೀಮಂತ ಹಂಜೆ, ಶಾಂತಿನಾಥ ಪಾಟೀಲ, ಬಾಹುಸಾಹೇಬ ಪಾಟೀಲ, ಅಶೋಕ ಪಾಟೀಲ, ರಾಯಗೌಡ ಪಾಟೀಲ, ಕುಮಾರ ಕಾಗವಾಡೆ, ಮಹಾವೀರ ಪಾಟೀಲ, ಅಣ್ಣಾಸಾಬ ಪಾಟೀಲ, ಮಾರುತಿ ಬಾಳಿಗಿಡೆ, ರಾಜು ಪರಮಾಜೆ, ಶರದ ಪಾಟೀಲ, ನೆಹರು ಮಗದುಮ್ಮ, ಮಹಾದೇವ ಕಾಂಬಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Sri Raghav

Admin