ಸೌದಿಯಲ್ಲಿ ಬಂಧಿಯಾಗಿದ್ದ ನಯಾಜ್ ಬಿಡುಗಡೆ : ಕುಟುಂಬಸ್ಥರಲ್ಲಿ ಸಂಭ್ರಮ, ದೇವೇಗೌಡರಿಗೆ ಕೃತಜ್ಞೆತೆ

Turuvekre--01

ತುರುವೇಕೆರೆ, ಜೂ.3- ಸೌದಿ ಅರೇಬಿಯಾದಲ್ಲಿ ಬಂಧಿಯಾಗಿದ್ದ ಪಟ್ಟಣದ ವಾಸಿ ನಯಾಜ್ ಅಹಮದ್ ಬಿಡುಗಡೆಗೊಂಡಿದ್ದಾರೆಂಬ ಸುದ್ದಿ ಬಂದ ಹಿನ್ನಲೆಯಲ್ಲಿ ಇತ್ತ ಅವರ ಕುಟುಂಬದವರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿ ಸಿಹಿ ಹಂಚಿ ಸಂಭ್ರಮಿಸಿದರು.  ಸೌದಿ ಅರೇಬಿಯಾದಲ್ಲಿ ಬಂಧಿಯಾಗಿರುವ ಪಟ್ಟಣದ ಸುಬ್ರಹ್ಮಣ್ಯ ನಗರದ ನಿವಾಸಿ ಮರದ ವ್ಯಾಪಾರಿ ನಯಾಜ್ ಅಹಮದ್(41) ಏಪ್ರಿಲ್ 20 ರಂದು ಉಮ್ರಾ ಯಾತ್ರೆಗೆಂದು ತೆರಳಿದ್ದರು. ಈ ಹಿಂದೆ ಮತ್ತೊಬ್ಬ ನಯಾಜ್ ಎಂಬುವವನು ಅಪರಾದ ನಡೆಸಿ ತಪ್ಪಿಸಿಕೊಂಡು ಬಂದಿದ್ದರಿಂದ ಪಟ್ಟಣದ ನಯಾಜ್ ಅಹಮದ್ ವಿಚಾರಣೆಯ ನೆಪದಲ್ಲಿ ಬಂಧಿತರಾಗಿದ್ದರು.ಸಹೋದರ ಫಯಾಜ್ ಅಹಮದ್ ಹಾಗೂ ಮುಸ್ಲಿಂ ಮುಖಂಡರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಸಂಸದ ಮುದ್ದಹನುಮೇಗೌಡ, ಹಾಗೂ ಶಾಸಕ ಎಂ.ಟಿ.ಕೃಷ್ಣಪ್ಪರಾದಿಯಾಗಿ ಎಲ್ಲರ ಸಹಕಾರದೊಂದಿಗೆ ವಿದೇಶಾಂಗ ಸಚಿವೆ ಸುಷ್ಮ ಸ್ವರಾಜ್‍ರವರನ್ನು ಭೇಟಿ ಮಾಡಿ ಸಂಪೂರ್ಣ ಮಾಹಿತಿ ನೀಡಿದ್ದರು.
ಸಚಿವರು ಭಾರತೀಯ ರಾಯಭಾರಿ ಕಚೇರಿಯ ಮೂಲಕ ಸೌದಿ ದೇಶದ ರಾಜತಾಂತ್ರಿಕರಲ್ಲಿ ಮಾತನಾಡಿ, ಇಬ್ಬರ ಬಗ್ಗೆ ವಿವರ ನೀಡಿ ತಪ್ಪು ಗ್ರಹಿಕೆಯಿಂದ ಪಟ್ಟಣದ ನಯಾಜ್‍ನನ್ನು ಬಂಧನ ಮಾಡಿದ್ದು ಈ ಕೂಡಲೇ ಬಿಡುಗಡೆಗೊಳಿಸಬೇಕೆಂದು ಮನವಿ ಮಾಡಿದ್ದರ ಹಿನ್ನಲೆಯಲ್ಲಿ ಆತನನ್ನು ಬಿಡುಗಡೆ ಮಾಡಲಾಗಿದೆ. ಬಿಡುಗಡೆಗೊಂಡ ವಿಚಾರ ತಿಳಿಯುತ್ತಿದ್ದಂತೆ ಅತನ ತಂದೆ ತಾಯಿ, ಹೆಂಡತಿ,ಮಕ್ಕಳು ಹಾಗೂ ಸಹೋದರ, ಸಹೋದರಿಯರಿಗೆ ಮರುಜೀವ ಬಂದಂತಾಗಿ ಸಿಹಿ ಹಂಚಿ ಸಂಭ್ರಮಪಟ್ಟರು.

ತಂದೆ ಭಾಷಾ ಸೇರಿದಂತೆ ಕುಟುಂಬದ ಸದಸ್ಯರು ಬಿಡುಗಡೆಗೊಳ್ಳಲು ಸಹಕರಿಸಿದ ಜನಪ್ರತಿನಿಧಿಗಳು, ಸಮಾಜಭಾಂದವರು ಹಾಗೂ ಮಾದ್ಯಮ ಮಿತ್ರರಿಗೆ ಧನ್ಯವಾದಗಳನ್ನು ತಿಳಿಸಿದರು.

ಮಾಜಿ ಪ್ರಧಾನಿಗೆ ಕೃತಜ್ಞತೆ : 
ತುರುವೇಕೆರೆ, ಜೂ.3- ತಾಲ್ಲೂಕಿನ ನಯಾಜ್ ಅಹಮದ್ ಬಿನ್ ಅನ್ವರ ಅಹಮದ್ ತುಂಬಾ ಗೌರವಾನ್ವಿತ ವ್ಯಕ್ತಿಯಾಗಿದ್ದು ಮಾಜಿ ಪ್ರಧಾನಿ ದೇವೇಗೌಡರು ಕೇಂದ್ರ ವಿದೇಶಾಂಗ ಮಂತ್ರಿ ಸುಷ್ಮಾ ಸ್ವರಾಜ್ ಅವರೊಂದಿಗೆ ಸಂಭಾಷಣೆ ನಡೆಸಿ ನಯಾಜ್ ಅಹಮದ್ ಅವರನ್ನು ಬಿಡುಗಡೆಗೊಳಿಸಲು ಶ್ರಮಿಸಿದ್ದಾರೆ ಎಂದು ಸ್ಥಳೀಯ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಮಾಯಕರಿಗೆ ತೊಂದರೆ ಕೊಡುವುದನ್ನು ಯಾರೇ ಆಗಲಿ ಮೊದಲು ನಿಲ್ಲಿಸ ಬೇಕು. ಇದೇ ಹೆಸರಿನ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸುವುದನ್ನು ಬಿಟ್ಟು ಅಮಾಯಕರನ್ನು ಬಂಧಿಸಿ ತೊಂದರೆ ಕೊಡುವುದನ್ನು ನಿಲ್ಲಿಸ ಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಮುಸ್ಲಿಂ ಸಮಾಜದ ಬಾಂಧವರು ಮಾತನಾಡಿ, ನಯಾಜ್ ಅಹಮದ್‍ನ್ನು ಬಿಡುಗಡೆಗೊಳಿಸಲು ಸಹಕರಿಸಿದ ಎಲ್ಲಾ ರಾಜಕೀಯ ನಾಯಕರಿಗೆ ಹಾಗು ಮಾದ್ಯಮ ಸ್ನೇಹಿತರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.  ಜಫ್ರುಲ್ಲಾ ಖಾನ್, ಎನ್.ಆರ್.ಸುರೇಶ್, ಕೊಳಾಲ ಗಂಗಾಧರ್, ಮಂಗೀಕುಪ್ಪೆ ಬಸವರಾಜು, ಪ.ಪಂ.ಸದಸ್ಯ ವಿಜಯ್ ಕುಮಾರ್, ಶಿವರಾಜು, ತ್ಯಾಗರಾಜು ಸ್ಭೆರಿದಂತೆ ಅನೇಕ ಮುಸ್ಲಿಂ ಬಾಂಧವರು ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin