ಸೌದಿ ಅರೇಬಿಯಾದ ಯುವರಾಜನಿಗೆ ಛಡಿ ಏಟಿನ ಶಿಕ್ಷೆ
ದುಬೈ, ನ.3– ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜಕುಮಾರನಿಗೆ ಮರಣದಂಡನೆ ವಿಧಿಸಿದ ಬೆನ್ನಲ್ಲೇ, ಸೌದಿ ಅರೇಬಿಯಾದ ಯುವರಾಜನಿಗೆ ಛಡಿ ಏಟಿನ ಶಿಕ್ಷೆ ನೀಡಲಾಗಿದೆ. ಸೌದಿ ಅರೇಬಿಯಾದಲ್ಲಿ ಆಳ್ವಿಕೆ ನಡೆಸುತ್ತಿರುವ ಅಲ್ ಸೌದ್ ರಾಜ ಕುಟುಂಬದ ರಾಜಕುಮಾರನಿಗೆ ನ್ಯಾಯಾಲಯವೊಂದು ಚೆಡ್ಡಾದಲ್ಲಿ ಛಡಿ ಏಟಿನ ಶಿಕ್ಷೆ ವಿಧಿಸಿದೆ. ಆದರೆ ಯಾವ ಕಾರಣಕ್ಕಾಗಿ ಈ ಶಿಕ್ಷೆ ವಿಧಿಸಲಾಗಿದೆ ಎಂದು ಎಂಬುದು ತಿಳಿದುಬಂದಿಲ್ಲ. ಈ ಕುರಿತು ಸೌದಿ ಅರೇಬಿಯಾದ ಕಾನೂನು ಸಚಿವಾಲಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೆಲವು ದಿನಗಳ ಹಿಂದಷ್ಟೇ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌದಿ ರಾಜಕುಮಾರ ತುರ್ಕಿ ಬಿನ್ ಸೌಟ್ ಅಲ್-ಕಬೀರ್ಗೆ ಮರಣದಂಡನೆ ವಿಧಿಸಲಾಗಿತ್ತು.