ಸೌಲಭ್ಯಗಳ ಸದುಪಯೋಗಕ್ಕೆ ವಿಶ್ವಕರ್ಮ ಜನಾಗಂದವರಿಗೆ ಶಾಸಕರ ಮನವಿ

Spread the love

vishwa-karma

ಕೆ.ಆರ್.ಪೇಟೆ, ಸೆ.27- ವಿಶ್ವಕರ್ಮ ಸಮುದಾಯದವರು ಸಂಘಟಿತರಾಗಿ ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಲು ಅಭಿವೃದ್ಧಿ ನಿಗಮ ಆರಂಭಿಸಲಾಗಿದ್ದು, ಇದರ ಮೂಲಕ ಸೌಲಭ್ಯ ಪಡೆದು ಅಭಿವೃದ್ಧಿ ಸಾಧಿಸಬೇಕು ಎಂದು ಶಾಸಕ ಕೆ.ಸಿ.ನಾರಾಯಣಗೌಡ ಮನವಿ ಮಾಡಿದ್ದಾರೆ.ಪಟ್ಟಣದ ಮಿನಿ ವಿಧಾನ ಸೌಧದ ಒಳಾವರಣದಲ್ಲಿ ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ಭಾರತೀಯ ಸಮಾಜದ ಅಭಿವೃದ್ದಿಗೆ ವಿಶ್ವಕರ್ಮ ಜನಾಂಗದ ಪಾತ್ರ ಮಹತ್ತರವಾದುದು. ಕೃಷಿ ಮತ್ತು ಧಾರ್ಮಿಕ ಕ್ಷೇತ್ರ ವಿಶ್ವಕರ್ಮ ಜನಾಂಗದ ಕುಶಲ ಕಲೆಗಾರರನ್ನು ಅವಲಂಭಿಸಿದೆ. ರೈತರಿಗೆ ಬೇಕಾದ ಎಲ್ಲಾ ಕೃಷಿ ಉಪಕರಣಗಳನ್ನು ಈ ನಿಗಮದಿಂದ ಪಡೆದುಕೊಳ್ಳಬಹುದು ಎಂದರು.

ತಹಸೀಲ್ದಾರ್ ಕೆ.ರತ್ನ , ಜಿಪಂ ಸದಸ್ಯ ರಾಮದಾಸ್, ತಾಒಂ ಅಧ್ಯಕ್ಷ ಜಯಲಕ್ಷ್ಮೀಸ್ವಾಮಿನಾಯಕ್, ಉಪಾಧ್ಯಕ್ಷ ಜಾನಕೀರಾಂ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ವಿಜಯಕುಮಾರ್, ಸದಸ್ಯರಾದ ಎನ್.ಕೆ.ನಿಂಗೇಗೌಡ, ಕಡೆಹೆಮ್ಮಿಗೆ ಶ್ಯಾಮಣ್ಣ, ದೀಪಶ್ರೀಮಂಜೇಶ್, ರಾಜ್ಯ ವಿಶ್ವಕರ್ಮ ಅಭಿವೃದ್ಧಿ ನಿಗಮದ ನಿರ್ದೇಶಕ ಹೆಚ್.ಪಿ.ಸತೀಶ್, ತಾಲೂಕು ವಿಶ್ವಕರ್ಮ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ಗಾಯಿತ್ರಿಸೋಮಾಚಾರ್ ಮತ್ತಿತರರು ಪಾಲ್ಗೊಂಡಿದ್ದರು.ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಬಸವೇಶ್ವರ ದೇವಾಲಯದ ಆವರಣದಿಂದ ತಾಲೂಕು ಕಚೇರಿಯ ವರೆಗೆ ವಿಶ್ವಕರ್ಮ ಮೂರ್ತಿಯ ಮೆರವಣಿಗೆ ಮಾಡಲಾಯಿತು.

 

► Follow us on –  Facebook / Twitter  / Google+

Facebook Comments

Sri Raghav

Admin