ಸ್ತ್ರೀ ಶಕ್ತಿ ಎದುರು ಯಾವಶಕ್ತಿ ನಿಲ್ಲಲಾರದು

Spread the love

mahadevpura

ಮಹದೇವಪುರ, ಆ.8- ಹೆಣ್ಣಿನ ಬೆಂಬಲ ವಿಲ್ಲದೆ ಯಾವ ಪುರುಷನೂ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಪ್ರತಿ ಯೊಬ್ಬ ಪುರುಷನ ಗೆಲುವಿನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂದು ಬಿಜೆಪಿ ಅಧ್ಯಕ್ಷ ವೆಂಕಟಸ್ವಾಮಿರೆಡ್ಡಿ ಹೇಳಿದರು. ಮಹದೇವಪುರ ಕ್ಷೇತ್ರದ ಗರುಡಾಚಾರ್‍ಪಾಳ್ಯದಲ್ಲಿ ಶ್ರೀ ವಿನಾಯಕ ಸ್ವಸಾಯ ಸಂಘದ ವತಿಯಿಂದ ಹಮ್ಮಿಕೊಂಡಿದ್ದ 9 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.  ಯಾವುದೇ ಒಬ್ಬ ಗಂಡಸ್ಸಿಗೆ ಸ್ತ್ರೀ ಬೆಂಬಲ ವಿಲ್ಲದಿದ್ದರೆ ಏನನ್ನೂ ಸಾಧಿಸಲು ಆಗುವುದಿಲ್ಲ. ಪ್ರತಿಯೊಂದು ಯಶಸ್ಸಿನ ಹಿಂದೆ ಮಹಿಳೆ ಇದ್ದೇ ಇರುತ್ತಾಳೆ ಎಂದು ಹೇಳಿದರು.ಸ್ತ್ರೀ ಶಕ್ತಿ ಸಂಘಗಳು ರಾಜ್ಯದಲ್ಲಿ ಒಟ್ಟಾಗಿ ಸೇರಿದರೆ ಸರ್ಕಾರವನ್ನೇ ಉರುಳಿಸಬಹುದು. ಅಂತಹ ಶಕ್ತಿ ಈ ಸಂಘಕ್ಕೆ ಇದೆ. ತಮ್ಮ ಶಕ್ತಿಯನ್ನು ಮುಂದಿನ ಚುನಾವಣೆಯಲ್ಲಿ ಪ್ರದರ್ಶಿ¸ ಬೇಕಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ಹೆಣ್ಣು ಮಕ್ಕಳ ಅಭಿವೃದ್ಧಿಗಾಗಿಯೇ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇದರ ಸದುಪಯೋಗವನ್ನು ಸ್ತ್ರೀ ಶಕ್ತಿ ಸಂಘಗಳು ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಗರುಡಾಚಾರ್‍ಪಾಳ್ಯ ವಾರ್ಡ್ ಬಿಜೆಪಿ ಮುಖಂಡ ಅನಂತರಾಮಯ್ಯ ಮಾತನಾಡಿ, ಮಹಿಳೆಯರಲ್ಲಿ ಮುಖ್ಯವಾಗಿ ಅಸೂಯೆ ಇರುತ್ತದೆ. ಇದನ್ನು ಬಿಟ್ಟ ಮಹಿಳೆ ಮುಂದೊಂದು ದಿನ ದೊಡ್ಡಮಟ್ಟದಲ್ಲಿ ಹೆಸರು ಮಾಡುತ್ತಾಳೆ ಎಂದು ಹೇಳಿದರು.
ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸ ಲಾಯಿತು.ಕನ್ನಡ ಸಾಹಿತ್ಯ ಪರಿಷತ್ತಿನ ಮಹದೇವಪುರ ಅಧ್ಯಕ್ಷ ಡಾ.ಅಜಿತ್‍ಕುಮಾರ್, ಮಹದೇವಪುರ ಮಹಿಳಾ ಮೋರ್ಚಾ ಅಧ್ಯಕ್ಷೆ ಕೃಷ್ಣವೇಣಮ್ಮ, ವಾರ್ಡ್ ಅಧ್ಯಕ್ಷ ದಯಾನಂದ್, ಮುಖಂಡ ರಾದ ಅಶೋಕ್‍ರೆಡ್ಡಿ, ಕೇಶವ, ಅರುಣಮ್ಮ ಮತ್ತಿತರರಿದ್ದರು.

Facebook Comments

Sri Raghav

Admin