ಸ್ವಚ್ಛ ಭಾರತಕ್ಕೂ ಸಿಂಧು, ಸಾಕ್ಷಿ , ದೀಪಾ ಮೆರಗು

ndhu-01

ನವದೆಹಲಿ, ಸೆ.4- ರಿಯೊ ಒಲಂಪಿಕ್ಸ್‍ನಲ್ಲಿ ಉತ್ತಮ ಸಾಧನೆ ಮಾಡಿ ದೇಶದ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸಿರುವ ಪಿ.ವಿ.ಸಿಂಧು, ಸಾಕ್ಷಿ ಮಲ್ಲಿಕ್ ಮತ್ತು ದೀಪಾ ಕರ್ಮಾಕರ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಸ್ವಚ್ಛ ಭಾರತ ಅಭಿಯಾನಕ್ಕೆ ಮೆರಗು ನೀಡುವ ಸಾಧ್ಯತೆಗಳಿವೆ.   ಒಲಿಂಪಿಕ್ ಪದಕ ವಿಜೇತರಾದ ಸಿಂಧು, ಸಾಕ್ಷಿ ಹಾಗೂ ಜಿಮ್ನಾಸ್ಟ್ ದೀಪಾ ಅವರನ್ನು ಸ್ವಚ್ಚ ಭಾರತ ಮಿಷನ್‍ನಲ್ಲಿ ತೊಡಗಿಸಿಕೊಳ್ಳಲು ನಾವು ಉದ್ದೇಶಿಸಿದ್ದೇವೆ. ಇವರನ್ನು ಈ ಅಭಿಯಾನದಲ್ಲಿ ಬಳಸಿಕೊಂಡರೆ ಸ್ವಚ್ಚತೆ ಮತ್ತು ನೈರ್ಮಲ್ಯದ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸಲು ನೆರವಾಗುತ್ತದೆ ಎಂದು ಕುಡಿಯುವ ನೀರು ಮತ್ತು ನೈರ್ಮಲೀಕರಣ ಇಲಾಖೆಯ ಕಾರ್ಯದರ್ಶಿ ಪರಮೇಶ್ವರನ್ ಅಯ್ಯರ್ ಹೇಳಿದ್ದಾರೆ.

ಈ ಕ್ರೀಡಾ ತಾರೆಯರು ಅನೇಕ ವನಿತೆಯರಲ್ಲಿ ಅದರಲ್ಲೂ ಗ್ರಾಮಾಂತರ ಪ್ರದೇಶಗಳ ಮಹಿಳೆಯರಿಗೆ ಸ್ಫೂರ್ತಿ ನೀಡಲಿದ್ದಾರೆ. ಹೀಗಾಗಿ ಈ ಸಂಬಂಧ ಕ್ರೀಡಾ ಸಚಿವಾಲಯವನ್ನು ಮನವಿ ಮಾಡುವುದಾಗಿ ಅವರು ತಿಳಿಸಿದ್ದಾರೆ.

► Follow us on –  Facebook / Twitter  / Google+

Sri Raghav

Admin