ಸ್ವಾತಂತ್ರ್ಯ ಹೋರಾಟಗಾರರ ಸಾಹಸ ಸ್ಮರಣೀಯ
ಅರಕಲಗೂಡು, ಆ.10- ಗುಲಾಮಗಿರಿ ಕೊನೆಗಾಣಿಸಲು ಪಣತೊಟ್ಟು ಕ್ವಿಟ್ ಇಂಡಿಯಾ ಚಳುವಳಿಗೆ ಕರೆ ನೀಡಿದ ರಾಷ್ಟ್ರದ ಸ್ವಾತಂತ್ರ್ಯ ಹೋರಾಟಗಾರರ ಧೈರ್ಯ ಸಾಹಸ ಸ್ಮರಿಸಿಕೊಳ್ಳುವುದು ಭಾರತೀಯರ ಆದ್ಯ ಕರ್ತವ್ಯ ಎಂದು ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಾಟಾಳ್ ರಮೇಶ್ ಹೇಳಿದರು.ಪಟ್ಟಣದ ಅನಕೃ ವೃತ್ತದಲ್ಲಿ ಕ್ವಿಟ್ ಇಂಡಿಯಾ ಚಳುವಳಿ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶದ ಸಂಪತ್ತನ್ನು ಕೊಳ್ಳೆ ಹೊಡೆದು ಸ್ವದೇಶಕ್ಕೆ ರವಾನಿಸಿ ಗುಲಾಮರಂತೆ ನಮ್ಮನ್ನು ನಡೆಸಿಕೊಳ್ಳುತ್ತಿದ್ದ ಬ್ರಿಟಿಷರನ್ನು ಭಾರತದಿಂದ ತೊಲಗಿಸಲು ಕ್ವಿಂಟ್ ಇಂಡಿಯಾ ಚಳುವಳಿ ಮೂಲಕ ಮಹಾತ್ಮ ಗಾಂಧಿ, ಜಯಪ್ರಕಾಶ ನಾರಾಯಣ, ಸರ್ದಾರ್ ವಲ್ಲಬಾಯಿ ಪಟೇಲ್ ಮುಂತಾದ ಅನೇಕ ಮಹನೀಯರ ಅಹಿಂಸಾತ್ಮಕ ಹೋರಾಟದ ಆದರ್ಶಗಳು ನಮ್ಮೆಲ್ಲರಿಗೂ ಸದಾ ಸ್ಫೂರ್ತಿಯಾಗಿರಬೇಕು ಎಂದರು.ತಾಪಂ ಸದಸ್ಯ ಮರೀಗೌಡ, ಬಿಜೆಪಿ ಮುಖಂಡರಾದ ಕೆಲ್ಲೂರು ಶಶಿಕುಮಾರ್, ಹೊನ್ನವಳ್ಳಿ ಲೋಕೇಶ್, ಚಂದ್ರು ಮುಂತಾದವರು ಪಾಲ್ಗೊಂಡಿದ್ದರು.