ಸ್ವೈನ್ ಫ್ಲೂ (ಎಚ್1ಎನ್1) ಬಗ್ಗೆ ಇರಲಿ ಎಚ್ಚರ

Swin-Glu

ಸ್ವೈನ್ ಫ್ಲೂ ಅಥವಾ ಎಚ್1ಎನ್1 ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆಯೇ, ವೈರಸ್ ಹರಡುವುದನ್ನು ತಡೆಯುವ ಸರಳ ವಿಧಾನಗಳನ್ನು ಅಳವಡಿಸಿಕೊಳ್ಳಲು ಜನರಿಗೆ ವೈದ್ಯರು ಸಲಹೆ ನೀಡುತ್ತಿದ್ದಾರೆ. ಕೈಗಳನ್ನು ತೊಳೆಯುವುದು, ಕೆಮ್ಮು ಅಥವಾ ಸೀನುವಾಗ ಬಾಯಿ ಹಾಗೂ ಮೂಗನ್ನು ಕವರ್ ಮಾಡಿಕೊಳ್ಳುವುದು, ಜನಜಂಗುಳಿ ಪ್ರದೇಶದಿಂದ ದೂರವಿರುವುದು ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವಂತಹ ಕ್ರಮಗಳನ್ನು ವೈದ್ಯರು ಸಲಹೆ ಮಾಡುತ್ತಿದ್ದಾರೆ.  ತಾಪಮಾನ ಹೆಚ್ಚಾದರೆ ಸೋಂಕು ನಿವಾರಣೆಗೆ ಉತ್ತಮ. ಯಾಕೆಂದರೆ ಇದು ಕೀಟಾಣುಗಳನ್ನು ಸಾಯಿಸುತ್ತದೆ. ಬೇಸಿಗೆಕಾಲದಲ್ಲಿ ಕಂಡುಬರುವ ಸೋಂಕುಗಳು ಸಾಮಾನ್ಯವಾಗಿ ನೀರಿನ ಕೊರತೆಯಿಂದಾಗಿರುತ್ತದೆ. ನೀರಿನ ಕೊರತೆಯಿಂದ ಬಹುತೇಕ ಸ್ಥಳಗಳಲ್ಲಿ ಮಲಿನ ನೀರು ಬಳಸುವುದರಿಂದ ಶುಚಿತ್ವ ಇರುವುದಿಲ್ಲ. ಇದರಿಂದ ಚರ್ಮದ ಸೋಂಕುಗಳು, ಡಯೇರಿಯಾ ರೋಗಗಳು, ಕಣ್ಣಿನ ಸೋಂಕುಗಳು ಇತ್ಯಾದಿ ಕಂಡುಬರುತ್ತದೆ ಎಂದು ಯಶವಂತಪುರ ಕೊಲಂಬಿಯಾ ಏಷ್ಯಾ ರೆಫರಲ್ ಆಸ್ಪತ್ರೆ ಸೋಂಕುಕಾರಕ ರೋಗಗಳ ಕನ್ಸಲ್ಟ್ಟೆಂಟ್ ಡಾ.ರಿನಿ ಬ್ಯಾನರ್ಜಿ ಹೇಳುತ್ತಾರೆ.

ಮಳೆಗಾಲ ಮತ್ತು ಎಚ್1ಎನ್1 ಮಧ್ಯೆ ಯಾವುದೇ ಸಂಬಂಧವಿಲ್ಲ. ತೇವಾಂಶದಿಂದಾಗಿ ಮಳೆಗಾಲದಲ್ಲಿ ವಿವಿಧ ಸೋಂಕುಗಳು ಆರಂಭವಾಗುತ್ತವೆ. ಮಳೆಯಲ್ಲಿ ನೆನೆಯುವುದನ್ನು ತಪ್ಪಿಸಿಕೊಳ್ಳಲು ಮನೆಯೊಳಗೆ ಇರುವ ವ್ಯಕ್ತಿಗಳಲ್ಲೂ ಸೋಂಕು ಹರಡುತ್ತವೆ. ಎಚ್1ಎನ್1 ಪ್ರಕರಣಗಳ ಹೆಚ್ಚಳದೊಂದಿಗೆ ಸೂಕ್ತ ತಪಾಸಣೆ ಕ್ರಮಗಳು ಜಾರಿಯಲ್ಲಿವೆ ಮತ್ತು ಜನರಲ್ಲಿ ಎಚ್1ಎನ್1 ಬಗ್ಗೆ ಹೆಚ್ಚು ಅರಿವು ಮೂಡಿದೆ. ಇದರಿಂದಾಗಿ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿವೆ. ಆದರೆ ಮರಣ ಪ್ರಮಾಣ ಈ ಹಿಂದಿನಂತೆಯೇ ಇದೆ.

ಸ್ವೈನ್ ಫ್ಲೂ ಗುಣಲಕ್ಷಣಗಳು ಇನ್‍ಪ್ಲೂಯೆಂಜಾಗೆ ಸಮನಾಗಿದೆ. ಶೀತ, ಕಫ, ಕಟ್ಟಿಕೊಳ್ಳುವ ಗಂಟಲು, ತಲೆನೋವು ಮತ್ತು ದೇಹದಲ್ಲಿ ನೋವು ಮತ್ತು ಕೆಲವು ಪ್ರಕರಣಗಳಲ್ಲಿ ವಾಕರಿಕೆ ಮತ್ತು ಡಯೇರಿಯಾ ಕಾಣಿಸಿಕೊಳ್ಳುತ್ತದೆ. ಯಾವುದೇ ಗುಣಲಕ್ಷಣಗಳನ್ನೂ ನಿರ್ಲಕ್ಷಿಸಬಾರದು ಮತ್ತು ಉಸಿರಾಟ ಕಷ್ಟವಾಗುವುದು, ತಲೆಸುತ್ತುವಿಕೆ, ವಾಂತಿ, ಭುಜ ನೋವಿನಂತಹ ಗುಣಲಕ್ಷಣಗಳು ಕಾಣಿಸಿಕೊಂಡಿದ್ದರಂತೂ ತಕ್ಷಣವೇ ವೈದ್ಯರ ಸಲಹೆ ಪಡೆಯಿರಿ.  ಎಚ್1ಎನ್1 ವೈರಸ್ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ. ಸೋಂಕಿತ ವ್ಯಕ್ತಿ ಮುಕ್ತ ಪ್ರದೇಶದಲ್ಲಿ ಸೀನಿದಾಗ ವೈರಸ್‍ಗಳು ಗಾಳಿಯಲ್ಲಿ ತೇಲಿಕೊಂಡು ಇತರರಿಗೆ ಹರಡುತ್ತವೆ. ಅಲ್ಲದೆ ಸೋಂಕಿತ ವ್ಯಕ್ತಿಯನ್ನು ಮುಟ್ಟಿದಾಗ ಅಥವಾ ಹಸ್ತಲಾಘವ ಮಾಡಿದಾಗ ಅಥವಾ ಸೋಂಕು ಇರುವ ಡೋರ್‍ನಾಬ್‍ಗಳು, ಟೇಬಲ್‍ಗಳು, ಕುರ್ಚಿಗಳನ್ನು ಸಾರ್ವಜನಿಕ ಸ್ಥಳದಲ್ಲಿ ಮುಟ್ಟಿದಾಗ ರೋಗಾಣುಗಳು ಹರಡುತ್ತವೆ ಎಂದು ಹೇಳುತ್ತಾರೆ ವೈದ್ಯರು.

ಒಂದು ಬಾರಿ ಸೀನಿದರೂ ಸಾವಿರಾರು ಗಾಳಿಯಲ್ಲಿ ಹರಡುತ್ತವೆ ಮತ್ತು ಹಲವು ವ್ಯಕ್ತಿಗಳಿಗೆ ಸೋಂಕು ತಗಲಿಸುತ್ತವೆ. ಅತ್ಯಂತ ಜನಜಂಗುಳಿಯಲ್ಲಿ ವಾಸಿಸುವ ವ್ಯಕ್ತಿಗಳು ಮತ್ತು ಅತಿಯಾದ ಜನಸಂಖ್ಯೆಯಿರುವ ವಾತಾವರಣದ ಸಂಪರ್ಕಕ್ಕೆ ಬರುವ ವ್ಯಕ್ತಿಗಳು ಅತಿಯಾದ ರಿಸ್ಕ್ ಹೊಂದಿರುತ್ತಾರೆ. ಅಂದರೆ ನಿತ್ಯವೂ ಸಾರ್ವಜನಿಕ ಸಾರಿಗೆ ಬಳಸುವ ವ್ಯಕ್ತಿಗಳಿಗೆ ಸೋಂಕು ತಗುಲಬಹುದು.   ಮಕ್ಕಳು, ಗರ್ಭಿಣಿಯರು, ವೃದ್ಧರು, ಡಯಾಬಿಟಿಸ್ ಹೊಂದಿರುವ ಜನರು ಮತ್ತು ದೀರ್ಘಕಾಲೀನ ಶ್ವಾಸಕೋಶದ ರೋಗವನ್ನು ಹೊಂದಿರುವವರು ಎಚ್1ಎನ್1 ರೋಗಕ್ಕೆ ತೆರೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಮತ್ತು ಸಾಧ್ಯವಾದಷ್ಟೂ ಬೇಗ ಅವರು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ವೈದ್ಯರು ಹೇಳಿದ್ದಾರೆ.  ಸೋಂಕು ತಗಲುವುದನ್ನು ದೂರವಿಡಲು ವೈದ್ಯರು ಸಲಹೆ ಮಾಡಿದ ಕೆಲವು ಕ್ರಮಗಳನ್ನು ಈ ಕೆಳಗೆ ನೀಡಲಾಗಿದೆ.

+  ಸೋಪು ಮತ್ತು ನೀರನ್ನು ಬಳಸಿ ದಿನದಲ್ಲಿ ಹಲವು ಬಾರಿ ಕೈಗಳನ್ನು ತೊಳೆದುಕೊಳ್ಳಿ. ನೀವು ಮನೆಯಿಂದ ಹೊರಗಡೆ ಇದ್ದರೆ, ಅಲ್ಕೋಹಾಲ್ ಆಧಾರಿತ ಕೈ ಸ್ಯಾನಿಟೈಸರ್‍ನಿಂದ ಕೈ ಸ್ವಚ್ಛಗೊಳಿಸಿಕೊಳ್ಳಿ.

+  ಸಾರ್ವಜನಿಕ ಸ್ಥಳಗಳಲ್ಲಿ ಬಾಗಿಲುಗಳು, ಸೀಟ್‍ಗಳು, ಟೇಬಲ್‍ಗಳು, ಹಿಡಿಕೆಗಳಂತಹ ಸಾಮಗ್ರಿಗಳನ್ನು ಮುಟ್ಟಬೇಡಿ; ಅವು ವೈರಸ್ ಅನ್ನು ಹೊಂದಿರಬಹುದು. ನೀವು ಅವುಗಳನ್ನು ಮುಟ್ಟಿದರೆ ಸೋಪ್ ಮತ್ತು ನೀರು ಅಥವಾ ಅಲ್ಕೋಹಾಲ್ ಆಧಾರಿತ ಕೈ ಸ್ಯಾನಿಟೈಸರ್‍ಗಳಿಂದ ತೊಳೆದುಕೊಳ್ಳಿ.

+  ಸಾಕಷ್ಟು ಪ್ರಮಾಣದ ನೀರು ಮತ್ತು ದ್ರವಾಹಾರ ಸೇವಿಸಿ ಮತ್ತು ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಲು ವಿಟಮಿನ್ ಸಿ ಹೊಂದಿರುವ ತಾಜಾ ಹಣ್ಣುಗಳನ್ನು ಸೇವಿಸಿ; ಇವು ವೈರಸ್ ಅನ್ನು ಎದುರಿಸಲು ಉತ್ತಮ ವಿಧಾನವಾಗಿದೆ.

+  ನೀವು ಸೀನುವಾಗ ಪೇಪರ್ ನ್ಯಾಪ್ಕಿನ್ ಅಥವಾ ಕರ್ಚೀಫ್‍ನಿಂದ ಮೂಗು ಮತ್ತು ಬಾಯಿಯನ್ನು ಎಂದಿಗೂ ಕವರ್ ಮಾಡಿಕೊಳ್ಳಿ ಮತ್ತು ಅವುಗಳನ್ನು ಮುಚ್ಚಿದ ಕಸದ ಬುಟ್ಟಿಯಲ್ಲಿ ಎಸೆಯಿರಿ. ಇವು ನಿಮ್ಮ ಕೈಯಲ್ಲಿ ಇಲ್ಲದಿದ್ದರೆ ಬಟ್ಟೆಯನ್ನು ಮೂಗು ಮತ್ತು ಬಾಯಿಗೆ ಮುಚ್ಚಿಕೊಂಡು ಸೀನು ಅಥವಾ ಕೆಮ್ಮುವುದನ್ನು ಮಾಡಿ.

+  ಅನಾರೋಗ್ಯ ಕಂಡುಬಂದರೆ ಮನೆಯಲ್ಲೇ ಇರಿ ಮತ್ತು ವೈದ್ಯರ ಸಹಾಯ ಪಡೆಯಿರಿ. ಸೋಂಕನ್ನು ಇತರರಿಗೆ ಹರಡದಂತೆ ತಡೆಯಲು ಇತರರನ್ನು ಮುಟ್ಟಬೇಡಿ.

+  ಜನಜಂಗುಳಿ ಇರುವ ಪ್ರದೇಶ, ವೃದ್ಧರು, ಮಕ್ಕಳು, ಶ್ವಾಸಕೋಶದ ರೋಗಗಳು/ ಹೃದಯರೋಗ/ ಗರ್ಭಿಣಿಯರು/ ಡಯಾಬಿಟೀಸ್/ಕಿಡ್ನಿ ರೋಗವಿದ್ದವರ ಬಳಿ ಇದ್ದರೆ ವ್ಯಾಕ್ಸಿನ್ ಪಡೆಯಿರಿ.

+ ಅಪ್ಪುಗೆ ಮತ್ತು ಹಸ್ತಲಾಘವ ಮಾಡಬೇಡಿ; ವ್ಯಕ್ತಿಗಳನ್ನು ಭೇಟಿ ಮಾಡಿದಾಗ ಮಾತಿನಲ್ಲೇ ಶುಭಾಶಯ ಹೇಳಿ

+  ತಿಳಿ ಬಣ್ಣದ/ ಹತ್ತಿ ಬಟ್ಟೆಯನ್ನು ಧರಿಸಿ

+  ಸೂರ್ಯನ ಬೆಳಕಿನಿಂದ ಮಕ್ಕಳು ದೂರವಿರಬೇಕು ಮತ್ತು ಬೆಳಗ್ಗೆ ಅಥವಾ ಸಂಜೆ (ಸೂರ್ಯಾಸ್ತದ ನಂತರ) ಮಾತ್ರವೇ ಆಟವಾಡಲು ಹೊರಗೆ ಹೋಗಬೇಕು.

+  ಕಚೇರಿಗೆ ತೆರಳುವವರು, ಕಚೇರಿ ಸಣ್ಣದಾಗಿದ್ದರೆ ವಾತಾವರಣ ಉತ್ತಮವಾಗಿರುವುದಕ್ಕಾಗಿ ಕಿಟಕಿಗಳನ್ನು ತೆರೆದಿಡಿ

+ ಉಷ್ಣಕ್ಕೆ ಸಂಬಂಧಿಸಿದ ಅನಾರೋಗ್ಯಗಳನ್ನು ದೂರವಿಡಲು ಮಕ್ಕಳು ಮತ್ತು ವೃದ್ಧರು ತಂಪಾದ ಸ್ಥಳದಲ್ಲಿ ಇರಬೇಕು.

+  ಉಷ್ಣತೆಯಿಂದ ನೀರಿನ ಕೊರತೆ ಉಂಟಾಗುತ್ತದೆ ಮತ್ತು ವಿವಿಧ ಸ್ಥಳಗಳಲ್ಲಿ ಮಲಿನ ನೀರನ್ನು ಬಳಸಲಾಗುತ್ತದೆ. ಹೀಗಾಗಿ ಹೊರಗಡೆ ನೀರು ಅಥವಾ ಹಣ್ಣಿನ ರಸ ಸೇವನೆ ಮಾಡಬೇಡಿ. ನೀರು ಕುಡಿಯದಿರಲು ಸಾಧ್ಯವೇ ಇಲ್ಲದಿದ್ದರೆ, ಕುಡಿಯಲು ನೀರು ಸುರಕ್ಷಿತವಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ. ಡಯೇರಿಯಾ ಎಂಬುದು ಮಲಿನ ನೀರು ಕುಡಿಯುವುದರಿಂದ ಉಂಟಾಗುವ ಪ್ರಮುಖ ಅನಾರೋಗ್ಯವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin