ಹಂಪಿಯಲ್ಲಿ ಚಿರತೆ ಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳ ಹರಸಾಹಸ
ಬಳ್ಳಾರಿ,ಫೆ.17- ಐತಿಹಾಸಿಕ ಹಂಪಿಯಲ್ಲಿ ದಿಡೀರ್ ಕಾಣಿಸಿಕೊಂಡಿದ್ದ ಎರಡು ಚಿರತೆಗಳನ್ನು ಹಿಡಿಯಲು ಆರ್ಎಫ್ಒ ನಾಗರಾಜ್ ನೇತೃತ್ವದ ತಂಡ ಶೋಧ ಕಾರ್ಯ ಇಂದು ನಡೆಸಿದೆ.
ನಿನ್ನೆ ದಿಢೀರನೆ ಹಂಪಿಯ ಬೆಟ್ಟದಲ್ಲಿ ಕಾಣಿಸಿಕೊಂಡ ಎರಡು ಚಿರತೆಗಳು ಸ್ಥಳೀಯರು ಹಾಗೂ ಪ್ರವಾಸಿಗರಲ್ಲಿ ಆತಂಕ ಸೃಷ್ಟಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಚಿರತೆಗಳಿಂದ ಯಾರಿಗೂ ತೊಂದರೆಯಾಗದಂತೆ ಅವುಗಳನ್ನು ಹಿಡಿಯಲು ನಾಗರಾಜ್ ತಂಡ ಮುಂದಾಗಿದೆ. ಅಲ್ಲದೆ ಚಿರತೆಗಳನ್ನು ಹಿಡಿಯಲು ಹಂಪಿಯ ಸುತ್ತಮುತ್ತ ಬೋನ್ಗಳನ್ನು ಇಡಲಾಗಿದೆ. ಯಾವುದೇ ಸಂದರ್ಭದಲ್ಲಿ ಚಿರತೆಗಳು ಬೋನ್ಗೆ ಬೀಳಲಿವೆ ಎಂದು ಅರಣ್ಯ ಸಿಬ್ಬಂದಿ ತಿಳಿಸಿದ್ದಾರೆ.