ಹಜ್ ಯಾತ್ರೆಗೆ ಯಾವುದೇ ಸಹಾಯ ಧನ ನೀಡುತ್ತಿಲ್ಲ : ರೋಷನ್ಬೇಗ್ ಸ್ಪಷ್ಟನೆ
ಬೆಳಗಾವಿ , ನ.22- ರಾಜ್ಯ ಸರ್ಕಾರ ಹಜ್ ಯಾತ್ರಿಗೆ ಯಾವುದೇ ಸಹಾಯಧನ ನೀಡುತ್ತಿಲ್ಲ. ಬದಲಾಗಿ ಕ್ಯಾಂಪ್ಗಳ ಆಯೋಜನೆ ಮತ್ತು ಹಜ್ ಸಮಿತಿಯ ನಿರ್ವಹಣೆಗೆ ಅನುದಾನ ನೀಡುತ್ತಿದೆ ಎಂದು ನಗರಾಭಿವೃದ್ಧಿ ಮತ್ತು ಹಜ್ ಸಚಿವ ಆರ್.ರೋಷನ್ಬೇಗ್ ಸ್ಪಷ್ಟಪಡಿಸಿದ್ದಾರೆ. ಶಾಸಕ ಉಮೇಶ್ಕತ್ತಿ ಅವರ ಪ್ರಶ್ನೆಗೆ ಉತ್ತರ ನೀಡಿರುವ ಅವರು, 2014ನೇ ಸಾಲಿನಲ್ಲಿ ಹಜ್ಯಾತ್ರೆಗೆ 17,184 ಅರ್ಜಿಗಳು ಬಂದಿದ್ದವು. 5382 ಯಾತ್ರಿಕರು ಯಾತ್ರೆ ಕೈಗೊಂಡಿದ್ದಾರೆ. 2015ರಲ್ಲಿ 21,082 ಅರ್ಜಿಗಳು ಬಂದಿದ್ದವು, 4963 ಮಂದಿ ಯಾತ್ರೆ ಮಾಡಿದ್ದಾರೆ. 2016ರಲ್ಲಿ 2625 ಅರ್ಜಿಗಳು ಬಂದಿದ್ದವು 4654 ಮಂದಿ ಯಾತ್ರೆ ಮಾಡಿದ್ದಾರೆ. ಸತತವಾಗಿ 4 ವರ್ಷ ಅರ್ಜಿ ಸಲ್ಲಿಸಿ ಅವಕಾಶ ಸಿಗದೇ ಇದ್ದ ವರು ಲಾಟರಿ ವ್ಯವಸ್ಥೆ ಬದಲಾಗಿ ನೇರ ವಾಗಿ ಆಯ್ಕೆಗೊಳ್ಳುವ ಅವಕಾಶವಿದೆ ಎಂದು ಅವರು ಹೇಳಿದರು.