ಹಠ ಮಾಡಿದ ಕ್ಯಾಪ್ಟನ್ ಅರ್ಜುನ, ಅರ್ಧಕ್ಕೆ ತಾಲೀಮು ಮೊಟಕು

Spread the love

Arjuna-Dasara-Mysuru

ಮೈಸೂರು, ಆ.20-ದಸರಾ ಆನೆಗಳಿಗೆ ನಿನ್ನೆಯಿಂದ ನಗರದ ಪ್ರಮುಖ ರಸ್ತೆಗಳಲ್ಲಿ ತಾಲೀಮು ಮುಂದುವರೆದಿದ್ದು, ಇಂದು ಅರ್ಜುನ ತಾಲೀಮಿನಲ್ಲಿ ಮುಂದೆ ಹೋಗಲು ಇಚ್ಛಿಸದ ಕಾರಣ ತಾಲೀಮನ್ನು ಅರ್ಧಕ್ಕೆ ಕೈಬಿಡಲಾಯಿತು. ಮೂರ್ನಾಲ್ಕು ದಿನಗಳ ಹಿಂದಷ್ಟ್ಟೆ ಕಾಡಿನಿಂದ ನಾಡಿಗೆ ಬಂದಿರುವ ಗಜಪಡೆಗೆ ನಗರದ ರಸ್ತೆಗಳು, ಜನಸಂದಣಿ, ಶಬ್ಧವನ್ನು ಪರಿಚಯ ಮಾಡಿಕೊಡಲು ಅರಮನೆ ಆವರಣದಿಂದ ಪ್ರಮುಖ ರಸ್ತೆಗಳಲ್ಲಿ ಕರೆದೊಯ್ಯಲಾಗುತ್ತದೆ.   ನಿನ್ನೆ ತಾಲೀಮು ಪ್ರಾರಂಭವಾದ ಸಂದರ್ಭದಲ್ಲಿ ಭದ್ರತೆ ನೀಡಬೇಕಾಗಿದ್ದ ಅಗತ್ಯ ಅಧಿಕಾರಿಗಳು ಇರದ ಕಾರಣ ಆನೆಗಳನ್ನು ಅರ್ಧ ದಾರಿಯಿಂದ ವಾಪಸ್ ಕರೆತರಲಾಗಿತ್ತು.

ಇಂದು ಬೆಳಗ್ಗೆ ಅರಮನೆಯಿಂದ ಬನ್ನಿಮಂಟಪದವರೆಗೆ ಸಯ್ಯಾಜಿರಾವ್ ರಸ್ತೆ ಮೂಲಕ ಕ್ಯಾಪ್ಟನ್ ಅರ್ಜುನನ ನೇತೃತ್ವದಲ್ಲಿ ಆನೆಗಳನ್ನು ಕರೆದೊಯ್ಯಲಾಗುತ್ತಿತ್ತು. ಆನೆಗಳ ಹಿಂದೆ ಪೊಲೀಸ್ ಜೀಪನ್ನು ಚಾಲಕ ಕೊಂಡೊಯ್ದದ್ದು ಬಿಟ್ಟರೆ, ಬೇರೆ ಯಾವ ಪೆಪೊಲೀಸರು ಕಂಡುಬರಲಿಲ್ಲ. ಜೊತೆಗೆ ಹೆಚ್ಚಿನ ಅಧಿಕಾರಿಗಳು ಇರಲಿಲ್ಲ.

ಕಾಡಿನಲ್ಲಿ ಸ್ವಚ್ಛಂದವಾಗಿ ಆಡಿಕೊಂಡಿದ್ದ ಅರ್ಜುನನಿಗೆ ನಗರದ ರಸ್ತೆಯಲ್ಲಿ ಸರಾಗವಾಗಿ ಸಾಗಲು ಇಷ್ಟವಾಗಿಲ್ಲ. ಸ್ವಲ್ಪ ದೂರ ತೆರಳಿ ಮುಂದೆ ಚಲಿಸದೆ ಹಠ ಮಾಡುತ್ತಾ ನಿಂತಲ್ಲೇ ನಿಲ್ಲುತ್ತಿದ್ದ. ಇದರಿಂದ ಮಾವುತ ಅಸಹಾಯಕನಾಗಿ ತಾಲೀಮು ನಡೆಸಲು ಆಗದೆ ಅರಮನೆಗೆ ಗಜಪಡೆಯನ್ನು ವಾಪಸ್ ಕರೆತಂದರು.

Sri Raghav

Admin