ಹಣಕಾಸಿನ ಜಗಳ : ಪತ್ನಿ ಕೊಲೆ
ಶಿಡ್ಲಘಟ್ಟ, ಸೆ.1- ಹಣಕಾಸಿನ ವಿಚಾರದಲ್ಲಿ ನಡೆದ ಜಗಳ ವಿಕೋಪಕ್ಕೆ ತಿರುಗಿ ಪತಿಯಿಂದಲೇ ಪತ್ನಿ ಹತ್ಯೆಯಾಗಿರುವ ಘಟನೆ ತಾಲ್ಲೂಕಿನ ಹುಂಡಿಗನಾಳ ಗ್ರಾಮದಲ್ಲಿ ನಡೆದಿದೆ.ಮೃತಳನ್ನು ಮಮತಾ (28) ಎಂದು ತಿಳಿದು ಬಂದಿದ್ದು, ಪ್ರಸ್ತುತ ಈಕೆಯ ಪತಿ ಮುನಿರಾಜುನನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳಕ್ಕೆ ಶಿಡ್ಲಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.