ಹಣ ಅವ್ಯವಹಾರ : ಮರಳು ಗಣಿ ಧಣಿ ಜೆ.ಶೇಖರ್ ರೆಡ್ಡಿ ಬಂಧನ

Spread the love

Sekhar-Reddy--01

ಚೆನ್ನೈ, ಮಾ.21-ನೋಟು ಅಮಾನ್ಯದ ನಂತರ ಹಣ ಅವ್ಯವಹಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮರಳು ಗಣಿ ಧಣಿ ಜೆ.ಶೇಖರ್ ರೆಡ್ಡಿ ಸೇರಿ ಮತ್ತು ಇಬ್ಬರು ಸಹಚರರನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬಂಧಿಸಿದ್ದಾರೆ. ಚೆನ್ನೈನಲ್ಲಿ ನಿನ್ನೆ ಇಡಿ ಅಧಿಕಾರಿಗಳು ಈ ಮೂವರನ್ನು ವಿಚಾರಣೆಗೆ ಒಳಪಡಿಸಿದ ನಂತರ ಹಣ ಅವ್ಯವಹಾರ ತಡೆ ಕಾಯ್ದೆ (ಪಿಎಂಎಲ್‍ಎ) ಅಡಿ ಬಂಧಿಸಲಾಯಿತು ಎಂದು ಉನ್ನತಾಧಿಕಾರಿಗಳು ತಿಳಿಸಿದ್ದಾರೆ.   ಬಂಧಿತ ರೆಡ್ಡಿ, ಕೆ.ಶ್ರೀನಿವಾಸುಲು ಮತ್ತು ಪಿ. ಕುಮಾರ್ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಲಾಗಿ ಆರೋಪಿಗಳನ್ನು ಮಾ.28ರವರೆಗೆ ಜೈಲಿಗೆ ಕಳುಹಿಸಲಾಗಿದೆ.

ನೋಟು ರದ್ದತಿ ಬಳಿಕ ಕಾಳ ಧನ ಪ್ರಕರಣಕ್ಕೆ ಸಂಬಂಧಪಟ್ಟಂತೆ ರೆಡ್ಡಿಯನ್ನು ಈ ಹಿಂದೆ ಸಿಬಿಐ ಬಂಧಿಸಿತ್ತು. ಜಾಮೀನಿನ ಮೇಲೆ ಅವರು ಬಿಡುಗಡೆಗೊಂಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin