ಹಣ ಸಿಗದಿದ್ದಕ್ಕೆ ಸಿಟ್ಟಿಗೆದ್ದು ಬ್ಯಾಂಕ್ ಧ್ವಂಸ ಗೊಳಿಸಿದ ಸಾರ್ವಜನಿಕರು (video)

https://www.youtube.com/watch?v=_H2LO4ViCbM

ಇಂಪಾಲ, ನ.29– ಐನೂರು ಮತ್ತು ಸಾವಿರ ರೂ. ಮುಖ ಬೆಲೆಯ ನೋಟುಗಳ ನಿಷೇಧದ ಹಿನ್ನೆಲೆಯಲ್ಲಿ ಉಂಟಾಗಿರುವ ಹಣಕಾಸು ಬಿಕ್ಕಟ್ಟಿನಿಂದ ಕ್ರೋಧಗೊಂಡ ಸಾರ್ವಜನಿಕರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‍ಬಿಐ) ಶಾಖೆಯೊಂದನ್ನು ಧ್ವಂಸ ಮಾಡಿರುವ ಘಟನೆ ಮಣಿಪುರ ರಾಜಧಾನಿ ಇಂಪಾಲದಲ್ಲಿ ಇಂದು ನಡೆದಿದೆ. ಕೇಂದ್ರ ಸರ್ಕಾರ ಹೆಚ್ಚಿನ ಬೆಲೆಯ ನೋಟುಗಳನ್ನು ನಿಷೇಧಿಸಿದ ದಿನದಿಂದಲೂ ಜನಸಾಮಾನ್ಯರು ತಮ್ಮ ದೈನಂದಿನ ಖರ್ಚು ವೆಚ್ಚಗಳು ಮತ್ತು ಸಣ್ಣ ಪುಟ್ಟ ವ್ಯವಹಾರಗಳಿಗೆ ತೀವ್ರ ಅಡಚಣೆಯಾಗಿರುವುದರಿಂದ ಈ ರೀತಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬ್ಯಾಂಕ್‍ಗಳು ಮತ್ತು ಎಟಿಎಂಗಳ ಮುಂದೆ ದಿನಗಟ್ಟಲೆ ಕಾದರೂ ತಮಗೆ ಬೇಕಾದ ಹಣ ಸಿಗದ ಹಿನ್ನೆಲೆಯಲ್ಲಿ ಬ್ಯಾಂಕನ್ನು ಧ್ವಂಸ ಮಾಡಲಾಗಿದೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಉದ್ರಿಕ್ತರನ್ನು ಚದುರಿಸಲು ಹರಸಾಹಸ ಪಡಬೇಕಾಯಿತು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download

Sri Raghav

Admin