ಹಬ್ಬದ ಖುಷಿಯಲ್ಲಿ ರಣಬೀರ್ ಕಪೂರ್

Spread the love

ranabeer

ಬಾಲಿವುಡ್‍ನ ಮೋಹಕ ನಟ ರಣಬೀರ್ ಕಪೂರ್ ದೀಪಾವಳಿ ಸಂಭ್ರಮೋಲ್ಲಾಸದಲ್ಲಿದ್ದಾನೆ. ತಾನು ನಟಿಸಿರುವ ಬಹು ನಿರೀಕ್ಷಿತ ಚಿತ್ರ ಆಯಿ ದಿಲ್ ಹೈ ಮುಷ್ಕಿಲ್ ಸಿನಿಮಾ ಸರಣಿ ವಿವಾದದಿಂದ ಮುಕ್ತವಾಗಿ ತೆರೆಕಂಡ ಸಂತಸದಲ್ಲಿರುವ ರಣಬೀರ್‍ಗೆ ಈಗ ದೀಪಾವಳಿ ಹಬ್ಬದ ಖುಷಿ. ಹೀಗಾಗಿ ರಣಬೀರ್‍ಗೆ ಡಬಲ್ ಖುಷಿ. ದೀಪಾವಳಿ ಪ್ರಯುಕ್ತ ಎಡಿಎಚ್‍ಎಂ ಚಿತ್ರದ ನಾಯಕಿ ಅನುಷ್ಕಾ ಶರ್ಮ ಜೊತೆ ಫಿಲ್ಮ್ ಪ್ರಮೋಷನ್‍ಗಾಗಿ ನಾಲ್ಕು ರಾಜ್ಯಗಳಿಗೆ ಭೇಟಿ ನೀಡಲಿದ್ಧಾನೆ.

ಕಪೂರ್ ಮತ್ತು ಅನು ಚಂಡಿಗಢ, ದೆಹಲಿ, ಅಹಮದಾಬಾದ್ ಮತ್ತು ಮುಂಬೈಗಳಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡು ಅಭಿಮಾನಿಗಳ ಜೊತೆ ದೀಪಾವಳಿ ಆಚರಿಸಲಿದ್ದಾನೆ. ಚಿತ್ರ ಬಿಡುಗಡೆಗೆ ಪೂರ್ವಭಾವಿಯಾಗಿ ಎಡಿಎಚ್‍ಎಂ ಪ್ರಮೋಷನ್ ಮಾಡುವ ಜೊತೆ ಅಭಿಮಾನಿಗಳೊಂದಿಗೆ ಕೆಲಕಾಲ ಬೆರೆತು ಅವರ ಮನಗೆಲ್ಲುವುದು ಈ ಜೋಡಿಯ ಉದ್ದೇಶ.  ಫಾಕ್ಸ್ ಸ್ಟುಡಿಯೋಸ್ ಮತ್ತು ಧರ್ಮ ಪ್ರೊ ಡಕ್ಷನ್ಸ್ ನಿರ್ಮಿಸಿರುವ ಈ ಸಿನಿಮಾಕ್ಕೆ ಖ್ಯಾತ ನಿರ್ದೇಶಕ ಕರಣ್ ಜೋಹರ್ ಆಕ್ಷನ್-ಕಟ್ ಹೇಳಿದ್ದಾರೆ.ಮಾಜಿ ಭುವನ ಸುಂದರಿ ಮತ್ತು ಖ್ಯಾತ ಅಭಿನೇತ್ರಿ ಐಶ್ವರ್ಯ ರೈ ಬಚ್ಚನ್ ಈ ಸಿನಿಮಾದ ಇನ್ನೊಂದು ಆಕರ್ಷಣೆ.

 

► Follow us on –  Facebook / Twitter  / Google+

Facebook Comments

Sri Raghav

Admin