ಹರಿಯಾಣ ಮಾಜಿ ಮುಖ್ಯಮಂತ್ರಿ ಹೂಡಾ ವಿರುದ್ದ ಕೇಸ್ ದಾಖಲಿಸಿಕೊಂಡ ಸಿಬಿಐ
ನವದೆಹಲಿ, ಏ.6- ಪಂಚಕುಲದಲ್ಲಿ, ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ಗೆ (ಎಜೆಎಲ್) ಭೂ ಮಂಜೂರಾತಿಯಲ್ಲಿ ನಡೆದಿದೆ ಎನ್ನಲಾದ ಭಾರೀ ಅಕ್ರಮಗಳಿಗೆ ಸಂಬಂಧಪಟ್ಟಂತೆ ಹರಿಯಾಣ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಹೂಡಾ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. 1982ರಲ್ಲಿ ಎಜೆಎಲ್ಗೆ ಭಾರೀ ಬೆಲೆ ಬಾಳುವ ಭೂಮಿ ನೀಡಲಾಗಿತ್ತು. 1992ರವರೆಗೆ ಪಂಚಕುಲದಲ್ಲಿ ನಿರ್ಮಾಣ ಕಾರ್ಯವಾಗಿರಲಿಲ್ಲ. ಇದರಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿದೆ ಎಂದು ಎಫ್ಐಆರ್ನಲ್ಲಿ ಸಿಬಿಐ ಆರೋಪಿಸಿದೆ.
< Eesanje News 24/7 ನ್ಯೂಸ್ ಆ್ಯಪ್ >