ಹಲವು ದಿನಗಳಿಂದ ಜನರಲ್ಲಿ ಭಯ ಮೂಡಿಸಿದ್ದ ಚಿರತೆ ಕೊನೆಗೂ ಬಿತ್ತು ಬೋನಿಗೆ

HUNSUR
ಹುಣಸೂರು, ಮೇ 8-ತಾಲೂಕಿನ ಕೊಯಮತ್ತೂರು ಕಾಲೋನಿ ಹಾಗೂ ಸುತ್ತಮುತ್ತಲ ಪ್ರದೇಶದ ಜನರಲ್ಲಿ ಭೀತಿ ಮೂಡಿಸಿದ್ದ ಚಿರತೆ ಬೋನಿಗೆ ಸಿಕ್ಕಿ ಬಿದ್ದಿದೆ.  ಕಳೆದ 3ತಿಂಗಳಿನಿಂದ ಈ ಭಾಗದಲ್ಲಿ ಚಿರತೆಯೊಂದು ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸುತ್ತಾ ಜನರಲ್ಲಿ ಭಯ ಸೃಷ್ಟಿ ಮಾಡಿತ್ತು.  ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಅರಣ್ಯಾಧಿಕಾರಿಗಳು ಕೊಯಮತ್ತೂರು ಕಾಲೋನಿಯಲ್ಲಿ ಬೋನು ಇರಿಸಿದ್ದರು.  ಇಂದು ಬೆಳಗಿನ ಜಾವ ಚಿರತೆ ಬೋನಿಗೆ ಸಿಕ್ಕಿಬಿದ್ದಿದೆ. ಚಿರತೆಯನ್ನು ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin