ಹಳಿ ತಪ್ಪಿದ ಜೇಲಂ ಎಕ್ಸ್ ಪ್ರೆಸ್ ರೈಲಿನ 10 ಬೋಗಿಗಳು, ಹಲವರಿಗೆ ಗಾಯ
ಚಂಡಿಗಢ, ಅ.4-ಜೇಲಂ ಎಕ್ಸ್ಪ್ರೆಸ್ನ 10 ಬೋಗಿಗಳು ಹಳಿ ತಪ್ಪಿ ಅನೇಕ ಪ್ರಯಾಣಿಕರು ಗಾಯಗೊಂಡ ಘಟನೆ ಇಂದು ಮುಂಜಾನೆ ಲೂಧಿಯಾನ ಬಳಿ ನಡೆದಿದೆ. ಫಿಲ್ಲೌರ್ ಮತ್ತು ಲಾಧೋವಾಲ್ ನಡುವೆ ಇಂದು ಮುಂಜಾನೆ 3.05ರ ಸಮಯ ಜೇಲಂ ಎಕ್ಸ್ಪ್ರೆಸ್ನ 10 ಕೋಚ್ಗಳು ಹಳಿ ತಪ್ಪಿವೆ ಎಂದು ಫಿರೋಜ್ಪುರ್ನ ವಿಭಾಗೀಯ ರೈಲ್ವೆ ಮ್ಯಾನೇಜರ್ (ಡಿಆರ್ಎಂ) ಅನುಜ್ ಪ್ರಕಾಶ್ ಹೇಳಿದ್ದಾರೆ. ಜಮ್ಮುವಿನಿಂದ ಪುಣೆಯತ್ತ ಬರುತ್ತಿದ್ದ ರೈಲು ಹಳಿ ತಪ್ಪಿತ್ತು. ಈ ಘಟನೆಯಲ್ಲಿ ಅನೇಕ ಪ್ರಯಾಣಿಕರು ಗಾಯಗೊಂಡಿದ್ದಾರೆ. ಪರಿಹಾರ ಕಾರ್ಯಾಚರಣೆ ನಡೆಯುತ್ತಿದೆ. ಈ ಮಾರ್ಗ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
► Follow us on – Facebook / Twitter / Google+
Facebook Comments