ಹಳೆ ಆಟೋ ರಿಕ್ಷಾ ಚಾಲಕರಿಗೆ ಶಾಕ್..!

Auto--2

ಬೆಂಗಳೂರು,ಡಿ.6- ಈಗಾಗಲೇ ಟು ಸ್ಟ್ರೋಕ್ ಆಟೋ ರಿಕ್ಷಾವನ್ನು ನಿಷೇಧಿಸಲು ಸಾರಿಗೆ ಇಲಾಖೆ ಆಲೋಚಿಸಿದೆ ಅದರ ಬೆನ್ನಲೇ ಹಳೆಯ ಆಟೋರಿಕ್ಷಾಗಳನ್ನು ರದ್ದುಗೊಳಿಸಲು ನಿರ್ಧರಿಸಿರುವ ವಿಚಾರ ಆಟೋ ಚಾಲಕರನ್ನು ಆತಂಕಕ್ಕೀಡು ಮಾಡಿದೆ. ಹಳೆಯ ಆಟೋ ರಿಕ್ಷಾವನ್ನು ರದ್ದುಗೊಳಿಸಲು ಎರಡು ಕೇಂದ್ರಗಳನ್ನು ತೆರೆದಿರುವ ಸರ್ಕಾರ ನೂತನ ಆಟೋವನ್ನು ಖರೀದಿಸಲು 30,000 ಸಾವಿರ ಸಬ್ಸಿಡಿ ನೀಡಲು ನಿರ್ಧರಿಸಿದೆ. ವಾಯು ಮಾಲಿನ್ಯ ನಿಯಂತ್ರಿಸಿ ಉತ್ತಮ ಪರಿಸರವನ್ನು ಸೃಷ್ಟಿಸುವ ಸಲುವಾಗಿ ಮಾಲಿನ್ಯ ಭರಿತ ವಾಹನಗಳನ್ನು ಬದಲಾಯಿಸಿಕೊಳ್ಳಲು ವಾಹನ ಚಾಲಕರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ 30 ಕೋಟಿ ಬಿಡುಗಡೆ ಮಾಡಲಿದೆ ಎಂದು ಸಿದ್ದರಾಮಯ್ಯ ಅವರು 2017ರ ಆರಂಭದಲ್ಲೇ ಘೋಷಿಸಿದ್ದರು.

ಆದರೆ ಹೊಸ ನಾಲ್ಕು ಸ್ಟ್ರೋಕ್ ಆಟೋಗಳಿಗೆ ಸುಮಾರು 1.5 ಲಕ್ಷ ರೂ. ಆಗುತ್ತಿದ್ದು ಅದನ್ನು ಖರೀದಿಸಲು ಕಷ್ಟವಾಗುತ್ತಿದೆ ಎಂದು ಚಾಲಕರು ಹೇಳುತ್ತಾರೆ. ರದ್ದುಗೊಳಿಸಲು ನಾವು ಆಟೋರಿಕ್ಷಾವನ್ನು ಪಡೆದುಕೊಳ್ಳುತ್ತೇವೆ. ಸಂಪೂರ್ಣ ರದ್ದು ಮಾಡಲು 2 ಸ್ಟ್ರೋಕ್ ಗಳ ಆಟೋಗಳನ್ನು ಕಡಿಮೆ ಮಾಡಲಿದೆ. 2 ಸ್ಟ್ರೋಕ್ ಆಟೋಗಳ ದಾಖಲಾತಿಯನ್ನು ಸಂಪೂರ್ಣ ನಿಷೇಧಿಸಿದ ನಂತರ ಚಾಲಕರಿಗೆ ಸಬ್ಸಿಡಿ ನೀಡಲಾಗುತ್ತದೆ.

ಬೆಂಗಳೂರು ನಗರದಲ್ಲಿ ಸುಮಾರು 50 ಸಾವಿರದಷ್ಟು ಎರಡು ಸ್ಟ್ರೋಕ್ ಆಟೋ ರಿಕ್ಷಾಗಳಿದ್ದು ರಾಜ್ಯದಲ್ಲಿ ಸೂಮಾರು 1.29 ಲಕ್ಷಗಳಿವೆ. 2013 ರವರೆಗೆ ಸಬಸ್‍ಇಡಿ ಮೊತ್ತ 15,000 ಆಗಿತ್ತು ಅದನ್ನು 30 ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಆದರೆ ಸಬ್ಸಿಡಿ ಮೊತ್ತ ಬರುವಾಗ ಬಹಳ ಸಮಯವಾಗುತ್ತದೆ ಎಂದು ವಾಹನ ಚಾಲಕರು ಹೇಳುತ್ತಾರೆ. ಈ ಸಮಯದಲ್ಲಿ ನಾವು ಡೌನ್ ಪೇಯ್ ಮೆಂಟ್ ಮಾಡುವುದು ಹೇಗೆ ಎನ್ನುವುದು ವಾಹನ ಚಾಲಕರ ಪ್ರಶ್ನೆಯಾಗಿದೆ.

ವಾಯುಮಾಲಿನ್ಯವನ್ನು ನಿಯಂತ್ರಿಸಿ ಉತ್ತಮ ಪರಿಸರವನ್ನು ಸೃಷ್ಟಿಸಲು ಮಾಲಿನ್ಯಭರಿತ ವಾಹನಗಳನ್ನು ಬದಲಾಯಿಸಿಕೊಳ್ಳಲು ವಾಹನ ಚಾಲಕರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ 30 ಕೋಟಿ ರೂಪಾಯಿ ಬಿಡುಗಡೆ ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವರ್ಷದ ಆರಂಭದಲ್ಲಿ ಘೋಷಿಸಿದ್ದರು. ಆದರೆ ಹೊಸ ನಾಲ್ಕು ಸ್ಟ್ರೋಕ್ ನ ಆಟೋರಿಕ್ಷಾಗಳಿಗೆ ಸುಮಾರು 1.5 ಲಕ್ಷ ರೂಪಾಯಿಗಳಾಗುತ್ತಿದ್ದು ಅದನ್ನು ಖರೀದಿಸಲು ಕಷ್ಟವಾಗುತ್ತದೆ ಎಂದು ಚಾಲಕರು ಹೇಳುತ್ತಾರೆ.

ರದ್ದುಗೊಳಿಸಲು ನಾವು ಆಟೋರಿಕ್ಷಾಗಳನ್ನು ಪಡೆದುಕೊಳ್ಳುತ್ತೇವೆ. ಸಂಪೂರ್ಣ ರದ್ದುಮಾಡಲು 2 ಸ್ಟ್ರೋಕ್‍ಗಳ ಆಟೋಗಳನ್ನು ಕಡಿಮೆ ಮಾಡಲಿವೆ. 2 ಸ್ಟ್ರೋಕ್ ಆಟೋಗಳ ದಾಖಲಾತಿಯನ್ನು ಸಂಪೂರ್ಣ ನಿಷೇಧಿಸಿದ ನಂತರ ಚಾಲಕರಿಗೆ ಸಬ್ಸಿಡಿಯನ್ನು ನೀಡಲಾಗುತ್ತದೆ. ಬೆಂಗಳೂರು ನಗರದಲ್ಲಿ ಸುಮಾರು 50,000 ಎರಡು ಸ್ಟ್ರೋಕ್ ಆಟೋರಿಕ್ಷಾಗಳಿದ್ದು ರಾಜ್ಯದಲ್ಲಿ 1.29 ಲಕ್ಷಗಳಿವೆ.2013ರವರೆಗೆ ಸಬ್ಸಿಡಿ ಮೊತ್ತ 15,000ಗಳಾಗಿದ್ದವು. 2014ರಲ್ಲಿ ಅದನ್ನು 30,000ಗಳಿಗೆ ಹೆಚ್ಚಿಸಲಾಯಿತು. ಆದರೆ ಸಬ್ಸಿಡಿ ಮೊತ್ತ ಬರುವಾಗ ಬಹಳ ಸಮಯವಾಗುತ್ತದೆ ಎನ್ನುತ್ತಾರೆ ವಾಹನ ಚಾಲಕರು. ನಾವು ಸಾಲ ಮಾಡಿ ವಾಹನ ಖರೀದಿಸಿದ ನಂತರವೂ ಸಬ್ಸಿಡಿ ಮೊತ್ತ ಸಿಗಲು ಹಲವು ತಿಂಗಳುಗಳಾಗುತ್ತವೆ. ಈ ಸಮಯದಲ್ಲಿ ನಾವು ಡೌನ್ ಪೇಮೆಂಟ್ ಮಾಡುವುದು ಹೇಗೆ ಎಂದು ಕೇಳುತ್ತಾರೆ ಆಟೋ ಚಾಲಕರು.

Sri Raghav

Admin