ಹವಾಲಾ ದಂಧೆ ಆರೋಪಿ ನ್ಯಾಯಮೂರ್ತಿಗೆ ಹೈಕೋರ್ಟ್ ಸಿಜೆ ಹುದ್ದೆಗೆ ಶಿಫಾರಸು

Spread the love

Hemant-Gupat--01

ನವದೆಹಲಿ, ಫೆ.8 : ಸುಪ್ರೀಂಕೋರ್ಟ್‍ನ ಕೊಲಿಜಿಯಂ (ನ್ಯಾಯಾಧೀಶರುಗಳ ಮಂಡಳಿ) ವಿವಿಧ ರಾಜ್ಯಗಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಹುದ್ದೆಗಳಿಗೆ ಶಿಫಾರಸು ಮಾಡಿರುವ ಒಂಭತ್ತು ಹೆಸರುಗಳ ಪಟ್ಟಿಯಲ್ಲಿ ಹವಾಲಾ ಹಣ ಪ್ರಕರಣದಲ್ಲಿ ಶಾಮೀಲಾದ ಆರೋಪ ಎದುರಿಸುತ್ತಿರುವ ನ್ಯಾಯಾಧೀಶರೊಬ್ಬರೂ ಸೇರಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.  ಪಂಜಾಬ್ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸು ಮಾಡಲಾದ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರಿಗೆ ಪ್ರಸ್ತುತ ಬಿಹಾರದ ಪಾಟ್ನಾ ಹೈಕೋರ್ಟ್‍ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ.

ಇವರ ವಿರುದ್ಧ ಕಾನೂನು ಜಾರಿ ನಿರ್ದೇಶನಾಲಯ ಹವಾಲಾ ದಂಧೆ ಪ್ರಕರಣದ ತನಿಖೆ ನಡೆಸುತ್ತಿದೆ. ಇವರ ಪತ್ನಿ ಅಲ್ಕಾ ಗುಪ್ತಾ, ಶೆಲ್ (ಬೇನಾಮಿ ಹೆಸರಿನ) ಕಂಪೆನಿಗಳ ಮೂಲಕ ನಡೆಯುತ್ತಿರುವ ಹವಾಲಾ ದಂಧೆಯ ಫಲಾನುಭವಿಗಳಲ್ಲಿ ಸೇರಿದ್ದಾರೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಈ ದಂಧೆಯಲ್ಲಿ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರ ಶಾಮೀಲಾಗಿರುವ ಆರೋಪವಿದ್ದು, ತನಿಖೆ ನಡೆಯುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin