ಹಾಕಿ : ವಿಭಾಗೀಯ ಮಟ್ಟಕ್ಕೆ ಆಯ್ಕೆ
ಸೂಲಿಬೆಲೆ, ಆ.20-ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ದೇವನಹಳ್ಳಿಯ ಬೆಟ್ಟಕೋಟೆ ರಾಮಕೃಷ್ಣ ಪ್ರೌಢಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ವಿಜೇತರಾಗಿ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಹಿರಿಯರ ವಿಭಾಗದಲ್ಲಿ ಚಾಂದಿನಿ, ಅನುಷ, ನಿಧಿಶ್ರೀ, ಗಗನ, ಸುಮ, ಕಿರಿಯರ ವಿಭಾಗದಲ್ಲಿ ಅಶ್ರಿತಾ, ರಾಜಶ್ರೀ, ವಿದ್ಯಾಶ್ರಿ, ಶ್ರೇಯ, ಕೀರ್ತನ ಆಯ್ಕೆಯಾಗಿದ್ದು, ಈ ವಿದ್ಯಾರ್ಥಿಗಳನ್ನು ದೈಹಿಕ ಶಿಕ್ಷಕ ನಾಗರಾಜು ಮತ್ತಿತರರು ಅಭಿನಂದಿಸಿದ್ದಾರೆ.ವಿದ್ಯಾರ್ಥಿಗಳು ನಿರಂತರ ತರಬೇತಿ ಪಡೆಯುವುದರ ಮೂಲಕ ವಿಭಾಗೀಯ ಮಟ್ಟದ ಕ್ರೀಡಾಕೂಟದಲ್ಲೂ ಗೆಲುವು ಸಾಧಿಸಬೇಕೆಂದು ಪ್ರಾಂಶುಪಾಲ ಹನುಮಂತಪ್ಪ, ಶಿಕ್ಷಕ ಸಂತೋಷ್ ಮತ್ತಿತರರು ಶುಭ ಹಾರೈಸಿದರು.