ಹಾಡಹಗಲೇ ಮನೆಗೆ ನುಗ್ಗಿದ ದುಷ್ಕರ್ಮಿಗಳು ಚಿನ್ನಾಭರಣಗಳನ್ನು ದೋಚಿ ಪರಾರಿ

robbery

ತುಮಕೂರು,ಆ.29-ಹಾಡಹಗಲೇ ಮನೆಗೆ ನುಗ್ಗಿದ ದುಷ್ಕರ್ಮಿಗಳು ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ನಗರದ ಹೆಗ್ಗೆರೆಯಲ್ಲಿ ನಡೆದಿದೆ. ಕೇರಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ.ಫಹತ್ ಗ್ರಾಮಾಂತರ ಠಾಣೆ ವ್ಯಾಪ್ತಿಯ ಹೆಗ್ಗೇರೆಯ ಮಸೀದಿ ಸಮೀಪ ಪತ್ನಿಯ ವಿದ್ಯಾಭ್ಯಾಸಕ್ಕೆ ಮನೆ ಮಾಡಿಕೊಟ್ಟಿದ್ದರು. ಕೇರಳದ ಮೂಲದ ಮಹಿಳೆಯೊಬ್ಬರನ್ನು ಮನೆಗೆಲಸಕ್ಕೆ ಇಟ್ಟುಕೊಂಡಿದ್ದರು.

ನಿನ್ನೆ ಪತ್ನಿ ಹಾಗೂ ಮಗನನ್ನು ನೋಡಲು ನಗರಕ್ಕೆ ಆಗಮಿಸಿದ್ದು , ಈ ವೇಳೆ ಶಾಪಿಂಗ್‍ಗೆ ಕರೆದೊಯ್ದಿದ್ದರು. ಇವರು ಮನೆಯಿಂದ ಹೊರ ಹೋದರು. ಮನೆಗೆಲಸದಾಕೆ ಮನೆಯಲ್ಲೇ ಇದ್ದ ಸಂದರ್ಭದಲ್ಲಿ ಯುವಕನೊಬ್ಬ ಮನೆಗೆ ನುಗ್ಗಿ ಕೈ ಸಿಕ್ಕ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಇನ್‍ಸೆಪೆಕ್ಟರ್ ಕಾಂತರಾಜು, ವೃತ್ತ ನಿರೀಕ್ಷಕ ರವಿ ಪರಿಶೀಲಿಸಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಮನೆಯ ಮುಂಭಾಗದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು , ನಿನ್ನೆಯಷ್ಟೇ ಬಂದಿದ್ದ ವೈದ್ಯರು ಸಿಸಿ ಕ್ಯಾಮೆರಾಗಳನ್ನು ಆಫ್ ಮಾಡಿ ಶಾಪಿಂಗ್‍ಗೆ ತೆರಳಿದ್ದರು ಎನ್ನಲಾಗಿದೆ.

ಅಪರಿಚಿತ ಯುವಕನೊಬ್ಬ ಮನೆಗೆ ಬಂದು ಬಾಗಿಲು ತಟ್ಟಿದ್ದು , ಮನೆಗೆಲೆಸದವಳು ಬಾಗಿಲು ತೆಗೆದಾಗ ಕೂಡಲೇ ತನ್ನ ಬಾಯಿಗೆ ಕರ್ಚೀಪಿನಿಂದ ಮುಚ್ಚಿ ಕೈಯನ್ನು ಕಟ್ಟಿ , ಮೊಬೈಲ್‍ಗಳು, ಚಿನ್ನದ ಉಂಗುರಗಳು ಹಾಗೂ ನಗದು ಸೇರಿದಂತೆ ಇತರೆ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾನೆ ಎಂದು ಮನೆಗೆಲಸದಾಕೆ ಅನುಮಾನಾಸ್ಪದವಾಗಿ ಹೇಳಿರುವುದು ಕಂಡುಬಂದಿದೆ. =ತುಮಕೂರು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಗಳನ್ನು ಸದ್ಯದಲ್ಲೇ ಬಂಧಿಸಲಾಗುವುದು ಎಂದು ತಿಳಿಸಿದರು.

 

► Follow us on –  Facebook / Twitter  / Google+

Sri Raghav

Admin