ಹಾವೇರಿ : ವಿದ್ಯುತ್ ಟ್ರಾನ್ಸಫಾರ್ಮರ್ ಏರಿ ಆತ್ಮಹತ್ಯೆ ಮಾಡಿಕೊಂಡ ರೈತ

Spread the love

Haveri--02

ಹಾವೇರಿ,ಫೆ.17-ಸಾಲಬಾಧೆ ತಾಳಲಾರದೆ ಹೊಲದಲ್ಲಿ ವಿದ್ಯುತ್ ಟ್ರಾನ್ಸಫರ್ಮರ್ ಹಿಡಿದು ರೈತನೊಬ್ಬ ಸಾವನ್ನಪ್ಪಿರುವ ಘಟನೆ ಚಿಕ್ಕಾಂಸಿ ಹೊಸೂರು ಗ್ರಾಮದಲ್ಲಿ ನಡೆದಿದೆ.
ಹಾನಗಲ್ ತಾಲ್ಲೂಕಿನ ಶಿರಗೋಡ ಗ್ರಾಮದ ಚಮನ್‍ಸಾಬ್ ಅರಿಶಿಣಗುಪ್ಪಿ (60) ಆತ್ಮಹತ್ಯೆ ಮಾಡಿಕೊಂಡ ರೈತ.   ನಾಲ್ಕು ಎಕರೆ ಜಮೀನು ಹೊಂದಿದ್ದ ಈತ , ಬ್ಯಾಂಕ್ ಮತ್ತು ಕೈಗಡುವಾಗಿ ಮೂರು ಲಕ್ಷ ಸಾಲ ಮಾಡಿಕೊಂಡಿದ್ದ. ತಮ್ಮ ಹೊಲದಲ್ಲಿ ಬೆಳೆದಿದ್ದ ಭತ್ತ ನೀರಿಲ್ಲದೆ ಒಣಗಿ ಹೋಗಿತ್ತು. ಸಾಲ ತೀರಿಸಲಾಗದೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಹಾನಗಲ್ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin