ಹಾಸನ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ

hasan

ಹಾಸನ, ಅ.4- ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆಗೆ ಶಾಂತಿಗ್ರಾಮದ ದೇವಸ್ಥಾನದ ಆವರಣದಲ್ಲಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿಯವರು ಚಾಲನೆ ನೀಡಿದರು.ವಿಶೇಷವಾಗಿ ಅಲಂಕಾರಗೊಳಿಸಿದ್ದ ಎತ್ತಿನಗಾಡಿಯಲ್ಲಿ ಸಮ್ಮೇಳನಾಧ್ಯಕ್ಷರಾದ ಡಾ.ಹಂಪನಹಳ್ಳಿ ತಿಮ್ಮೇಗೌಡ ಅವರನ್ನು ಕರೆದೊಯ್ಯಲಾಯಿತು. ಹತ್ತಾರು ಕಲಾತಂಡಗಳು ಮೆರವಣಿಗೆಗೆ ವಿಶೇಷ ಮೆರಗು ನೀಡಿದವು.ಗಾರಡಿ ಗೊಂಬೆಗಳು, ಎತ್ತಿನಗಾಡಿಯಲ್ಲಿ ಕನ್ನಡದ ಮೇರು ಸಾಹಿತಿಗಳ ಭಾವಚಿತ್ರ ಹಾಗೂ ವೇಷದಾರಿಗಳ ಸಾಲು, ಕೀಲುಕುದುರೆ, ವೀರಗಾಸೆ, ಸೇರಿದಂತೆ ಹಲವಾರು ಬಗೆ ಬಗೆಯ ಕಲಾತಂಡಗಳು ಸಾಹಿತ್ಯ ಸಮ್ಮೇಳನಾಧ್ಯಕ್ಷರ

hassan4

hassan1

ಮೆರವಣಿಗೆಗೆ ರಂಗು ತಂದವು.ಗ್ರಾಮದ ಬೃಹತ್ ಗಣಪತಿ ದೇವರನ್ನು ಸಹ ಮೆರವಣಿಗೆಯಲ್ಲಿ ಕೊಂಡೊಯ್ದಿದ್ದು ವಿಶೇಷವಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಸಾಹಿತ್ಯಾಭಿಮಾನಿಗಳು, ಸಾಹಿತಿಗಳು ಶಾಲಾ ಕಾಲೇಜು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಕನ್ನಡ ಪರ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಣ್ಣಪ್ಪ, ತಾಪಂ ಸದಸ್ಯರುಗಳಾದ ಶಾಂತಿಗ್ರಾಮದ ಶಿವಶಂಕರ್, ಎಸ್.ಬಂಡಿಹಳ್ಳಿಯ ಪದ್ಮಮ್ಮ ರಾಜಣ್ಣ, ಕೆಂಚಟ್ಟಹಳ್ಳಿಯ ದಿನೇಶ್ ಕೆ.ಎಂ. ಮಡೆನೂರಿನ ಸುರೇಂದ್ರ, ತಾಪಂ ಇಒ ಕೆ.ಸಿ.ದೇವರಾಜೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಟಿ.ಪುಟ್ಟರಾಜು, ಪೊಲೀಸ್ ಅಧಿಕಾರಿ ಎಸ್.ಟಿ.ರೇವಣ್ಣ, ಸ್ವಾತಂತ್ರ್ಯ ಹೋರಾಟಗಾರರದ ಹೆಚ್.ಎಂ.ಶಿವಣ್ಣ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

hassan2

► Follow us on –  Facebook / Twitter  / Google+

Sri Raghav

Admin