ಹಾಸ್ಟೆಲ್‍ಗಳಿಗೂ ಸಿಸಿಟಿವಿ ಅಳವಡಿಕೆ, ಸೆಕ್ಯೂರಿಟಿ ನೇಮಕ : ಆಂಜನೇಯ

Anjaneya

ಬೆಂಗಳೂರು,ಜ.6-ಮುಂದಿನ ಶೈಕ್ಷಣಿಕ ಸಾಲಿನಿಂದ ವಿದ್ಯಾರ್ಥಿ ನಿಲಯಗಳಿಗೆ ಸಿಸಿ ಟಿವಿ ಅಳವಡಿಕೆ ಹಾಗೂ ಕಾವಲುಗಾರರನ್ನು ನೇಮಕ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದರು. ಬಿಜೆಪಿ ಮಹಿಳಾ ಮೋರ್ಚಾ ಸಲ್ಲಿಸಿದ್ದ ಸರ್ಕಾರಿ ಹಿಂದುಳಿದ, ಎಸ್ಸಿ-ಎಸ್ಟಿ ಸಮೀಕ್ಷಾ ವರದಿಯನ್ನು ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸ್ಟೆಲ್‍ಗಳ ಸುಧಾರಣೆಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ವರದಿಯನ್ನು ಮೋರ್ಚಾಕ್ಕೆ ಕಳುಹಿಸಿಕೊಡಲಾಗುವುದು ಅಲ್ಲದೆ ಮೋರ್ಚಾದ ಸಮೀಕ್ಷೆಯ ವರದಿಉಲ್ಲೇಖಿಸಿರುವ ಸಮಸ್ಯೆಗಳ ಬಗ್ಗೆ ಗಮನಹರಿಸಿ ಈಡೇರಿಸುವುದಾಗಿ ತಿಳಿಸಿದರು.

ಬಿಜೆಪಿ ಮಹಿಳಾ ವಾರ್ಡನ್‍ಗಳ ಸಮಸ್ಯೆ ನೀಗಿಸಲು ಕೆಪಿಎಸ್‍ಸಿ ಮೂಲಕ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ. ಬಾಡಿಗೆ ಕಟ್ಟದ ಹಾಸ್ಟೆಲ್‍ಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳುವುದು, ಹೊರಗುತ್ತಿಗೆ ಸಿಬ್ಬಂದಿಗೆ ನಿಗದಿಪಡಿಸಿದ ವೇತನವನ್ನು ಪಾವತಿಸಬೇಕು, ಸಿಬ್ಬಂದಿಯ ಖಾತೆಗೆ ಹಣ ವರ್ಗಾಯಿಸಬೇಕು, ವೇತನ ಪಾವತಿಯಲ್ಲಿ ಲೋಪ ಉಂಟಾಗುವ ಏಜೆನ್ಸಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.  ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ ಮಾತನಾಡಿ, ರಾಜ್ಯದ 740 ವಸತಿ ನಿಲಯಗಳನ್ನು ಸಮೀಕ್ಷೆ ಮಾಡಲಾಗಿದೆ. 35 ದಿನಗಳ ಅವಧಿಯಲ್ಲಿ ಬಿಜೆಪಿಯು 1632 ಮಹಿಳಾ ಕಾರ್ಯಕರ್ತರು, 63,588 ವಿದ್ಯಾರ್ಥಿನಿಯರನ್ನು ಸಂಪರ್ಕಿಸಿ ವರದಿ ಸಿದ್ದಪಡಿಸಿದೆ ಎಂದು ತಿಳಿಸಿದರು.

ಹಿಂದುಳಿದ ವರ್ಗ ಹಾಗೂ ಎಸ್ಸಿ-ಎಸ್ಟಿ ವಸತಿ ನಿಲಯ , ಕಿತ್ತೂರುರಾಣಿ ಚನ್ನಮ್ಮ ವಸತಿ ನಿಲಯಗಳ ಸ್ಥಿತಿಗತಿ ಸಮೀಕ್ಷೆ ಒಳಗೊಂಡಿದೆ. 432 ವಸತಿ ನಿಲಯಗಳಿಗೆ ಸ್ವಂತ ಕಟ್ಟಡಗಳಿಲ್ಲ. ಶೇ.83ರಷ್ಟು ಹಾಸ್ಟೆಲ್‍ಗಳಲ್ಲಿ ಸಿಸಿಟಿವಿ ಕಾವಲುಗಾರರು ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.  ಯೋಗ ಶಿಕ್ಷಣ ಕಡ್ಡಾಯವಾಗಿ ನೀಡುವ ವ್ಯವಸ್ಥೆ ಪ್ರಾರಂಭಿಸಬೇಕು, ಸೊಳ್ಳೆಪರದೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು, ಕೌಶಲ್ಯ ತರಬೇತಿ ಕೈಗೊಳ್ಳಬೇಕು ಹೀಗೆ ಹಲವು ಸಲಹೆಗಳನ್ನು ಸಮೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ ಎಂದು ಹೇಳಿದರು. ಬಾಲಕಿಯರ ಸುರಕ್ಷತೆಗೆ ಸಿಸಿಟಿವಿ, ಮಹಿಳಾ ವಾರ್ಡನ್ ನೇಮಿಸಬೇಕು, ಅವರ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin