ಹಿಂಸಾಚಾರಪೀಡಿತ ಮೊಸುಲ್‍ನಲ್ಲಿ ಆಹಾರಕ್ಕಾಗಿ ಹಾಹಾಕಾರ

Spread the love

mosul

ಮೊಸುಲ್, ಮೇ 8-ಅತ್ಯುಗ್ರ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರ ವಶದಲ್ಲಿರುವ ಹಾಗೂ ಇತ್ತೀಚೆಗೆ ಭದ್ರತಾ ಪಡೆಗಳ ನಿಯಂತ್ರಣಕ್ಕೆ ಬಂದಿರುವ ಇರಾಕಿನ ಮೊಸುಲ್ ಪ್ರದೇಶಗಳಲ್ಲಿ ಸಿಲುಕಿರುವ ನಾಗರಿಕರಲ್ಲಿ ಆಹಾರಕ್ಕಾಗಿ ಹಾಹಾಕಾರ ಉಂಟಾಗಿದೆ. ಪಶ್ಚಿಮ ಮೊಸುಲ್‍ನ ಮಹತ್ತ ಉಪನಗರದಲ್ಲಿ ಆಶ್ರಯ ಪಡೆದಿರುವ ಕುಟುಂಬಗಳು ಮನೆಯ ಪಕ್ಕದಲ್ಲಿ ಬೆಳೆಯುತ್ತಿರುವ ಹಸಿರು ಕಾಯಿ ಮತ್ತು ಸೊಪ್ಪುಗಳನ್ನು ತಿಂದು ಬದುಕುತ್ತಿದ್ದಾರೆ.   ಮೊಸುಲ್‍ನಿಂದ ಉಗ್ರರನ್ನು ಹೊರದಬ್ಬುವ ಕಾರ್ಯಾಚರಣೆ ಈಗಲೂ ಮುಂದುವರಿದಿದೆ. ಹೀಗಾಗಿ ಈ ಪ್ರದೇಶಗಳಿಗೆ ಆಹಾರ ಪೂರೈಕೆಯಾಗುತ್ತಿಲ್ಲ. ಕೆಲವು ಸ್ಥಳಗಳು ಸೇನೆ ವಶದಲ್ಲಿದ್ದರೂ, ಈಗಲೂ ಅವು ಅತ್ಯಂತ ಅಪಾಯಕಾರಿ ಪ್ರದೇಶಗಳಾಗಿವೆ ಹಾಗೂ ದಾಳಿ ಭೀತಿಯಿಂದಾಗಿ ಅಲ್ಲಿಗೆ ತಲುಪಲು ನೆರವು ಗುಂಪುಗಳು ಹಿಂಜರಿಯುತ್ತಿವೆ.ಕೆಲವು ಕುಟುಂಬಗಳು ಹಲವಾರು ಕಿಲೋಮೀಟರ್ ದೂರ ನಡೆದು ಮಾರುಕಟ್ಟೆಯನ್ನು ತಲುಪುತ್ತಿವೆ. ಆದರೆ ಆದರೆ ಅಗತ್ಯ ವಸ್ತುಗಳ ದರ ಅತ್ಯಂತ ದುಬಾರಿಯಾಗಿದೆ. ಹಿಂಸಾಚಾರಪೀಡಿತ ಮೊಸುಲ್‍ನಲ್ಲಿ ಯಾವುದೇ ಉದ್ಯೋಗ ಇಲ್ಲ. ಇಲ್ಲಿನ ನಾಗರಿಕರು ಒಂದೆಡೆ ಭಯೋತ್ಪಾದಕರ ದಾಳಿ ಆತಂಕ ಮತ್ತೊಂದೆಡೆ ಆಹಾರದ ತೀವ್ರ ಅಭಾವನ್ನು ಎದುರಿಸುತ್ತಿದ್ದಾರೆ.   ಐಎಸ್ ಉಗ್ರರ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ ಈಗಲೂ ಸುಮಾರು 5 ಲಕ್ಷ ಮಂದಿ ಸಿಲುಕಿ ನರಳುತ್ತಿದ್ದಾರೆ. ಅವರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕಾಗಿ ಅಲ್ಲಿನ ನಿವಾಸಿಗಳಿಗೆ ವಿಶ್ವಸಂಸ್ಥೆ ಕಳೆದ ಆರು ತಿಂಗಳಿನಿಂದ ಆಹಾರ ಪೂರೈಕೆಯನ್ನು ಸ್ಥಗಿತಗೊಳಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin