ಹಿರೇಮಠ್’ಗೆ ತಿರುಗೇಟು ನೀಡಿದ ದೇವೇಗೌಡರು
ಬೆಂಗಳೂರು, ನ.1- ನನ್ನ ಕುಟುಂಬದ ತೇಜೋವಧೆ ಗಾಗಿ, ವರ್ಚಸ್ಸು ಹಾಳುಮಾಡಲು ಕೆಲವರು ಭೂಕಬಳಿಕೆಯ ಆರೋಪಗಳನ್ನು ಮಾಡುತ್ತಿದ್ದಾರೆ. ಇದು ಹೊಸದೇನಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತಿರುಗೇಟು ನೀಡಿದ್ದಾರೆ.ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಳೆದ 1985ರಿಂದ ಹಲವಾರು ತನಿಖೆಗಳು ನಡೆದಿವೆ. ಅವುಗಳಲ್ಲಿ ಎಲ್ಲಾ ಆರೋಪಗಳು ರಾಜಕೀಯ ಪ್ರೇರಿತ ಎಂದು ತೀರ್ಪು ಬಂದಿದ್ದು, ಆದರೂ ಕೆಲವರು ನಮ್ಮ ಕುಟುಂಬದ ವರ್ಚಸ್ಸನ್ನು ಹಾಳು ಮಾಡಲು ಪ್ರಯತ್ನ ನಡೆಸುತ್ತಲೇ ಬಂದಿದ್ದಾರೆ. ಇದುವರೆಗೂ ಯಾರೂ ಇದರಲ್ಲಿ ಸಫಲರಾಗಿಲ್ಲ ಎಂದು ಗುಡುಗಿದರು.ರಾಮಕೃಷ್ಣ ಹೆಗಡೆ, ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಲೋಕಾಯುಕ್ತ, ಸಿಒಡಿ ತನಿಖೆಗಳೂ ನಡೆದಿವೆ. ನ್ಯಾಯಾಲಯದಲ್ಲೂ ವಿಚಾರಣೆ ನಡೆದು ಸತ್ಯ ಹೊರ ಬಂದಿದೆ. ಆದರೂ ಕೆಲವರು ನಿರಂತರ ಅಪಪ್ರಚಾರ ನಡೆಸಿ