ಹುಕ್ಕಾ ಬಾರ್ ಮೇಲೆ ಸಿಸಿಬಿ ದಾಳಿ : ನಟ ಅರುಣ್ಗೌಡ ಸೇರಿ 7 ಮಂದಿ ಬಂಧನ
ಬೆಂಗಳೂರು, ಮೇ 9- ಹುಕ್ಕಾಬಾರ್ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು 7 ಜನರನ್ನು ಬಂಧಿಸಿದ್ದಾರೆ. ಅರುಣ್ಗೌಡ, ಸಂಗಪ್ಪ, ಮಂಜುನಾಥ್ ಹೋಡಲ್, ಮಹೇಶ್ಬಾಬು, ವೀರಶೆಟ್ಟಿ, ಮನೀಶ್ ಮತ್ತು ವಿಕೇಶ್ ಬಂಧಿತರು. ಚಂದ್ರಾಲೇಔಟ್ನ ಪೆಟ್ರೋಲ್ ಬಂಕ್ ಬಳಿಯಿರುವ ಚಾರ್ಕೋಲ್ ಕೆಫೆ ಹೆಸರಿನಲ್ಲಿ ಹುಕ್ಕಾಬಾರ್ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಚಂದ್ರಾಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS
Facebook Comments