‘ಹುಚ್ಚ’ ಮಾಡಿದ ಅವಾಂತರ : ಏರ್‍ಪೋರ್ಟ್‍ಗೆ ಹಿಂದಿರುಗಿದ ವಿಮಾನ..!

Spread the love

Plane--01

ಮೆಲ್ಬರ್ನ್, ಜೂ. 1-ಬಾಂಬ್ ಸ್ಫೋಟಿಸುವುದಾಗಿ ಮಾನಸಿಕ ಅಸ್ವಸ್ಥ ಪ್ರಯಾಣಿಕನೊಬ್ಬ ಬೆದರಿಕೆ ಹಾಕಿದ್ದರಿಂದ ಆತಂಕದ ವಾತಾವರಣ ಸೃಷ್ಟಿಯಾಗಿ ಮಲೇಷ್ಯಾದ ಏರ್‍ಲೈನ್ಸ್ ವಿಮಾನವೊಂದು ಏರ್‍ಪೋರ್ಟ್‍ಗೆ ಹಿಂದಿರುಗಿದ ಘಟನೆ ಆಸ್ಟ್ರೇಲಿಯಾದ ಮೆಲ್ಬರ್ನ್‍ನಲ್ಲಿ ನಡೆದಿದೆ.   ಆಸ್ಪ್ರೇಲಿಯಾ ಮೂಲದವನಾದ 25 ವರ್ಷದ ಯುವಕನೊಬ್ಬ ವಿಮಾನಯಾನದ ವೇಳೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿ ಕಾಕ್‍ಪಿಟ್ (ಪೈಲೆಟ್‍ಗಳ ಸ್ಥಳ) ಒಳಗೆ ನುಸುಳಲು ಯತ್ನಿಸಿದ. ಮಾನಸಿಕ ಅಸ್ವಸ್ಥನಾದ ಈತನ ವಿಚಿತ್ರ ವರ್ತನೆಯಿಂದ ಆತಂಕಗೊಂಡ ಸಿಬ್ಬಂದಿ ಮತ್ತು ಪ್ರಯಾಣಿಕರು ಆತನನ್ನು ಹಿಡಿದು ಬೆಲ್ಸ್ ಗಳಿಂದ ಕಟ್ಟಿ ಹಾಕಿದರು.



ಮಲೇಷ್ಯಾ ರಾಜಧಾನಿ ಕೌಲಾಲಂಪೂರ್‍ಗೆ ಹೊರಟಿದ್ದ ಎಂಎಚ್-128 ವಿಮಾನವನ್ನು ಪೈಲೆಟ್‍ಗಳು ತಕ್ಷಣ ಮೆಲ್ಬನ್ ಏರ್‍ಪೋರ್ಟ್‍ನಲ್ಲಿ ತುರ್ತು ಭೂಸ್ಪರ್ಶ ಮಾಡಿಸಿದರು. ವಿಮಾನ ಮೇಲೇರಿದ 30 ನಿಮಿಷಗಳ ನಂತರ ಮತ್ತೆ ಅದು ಹಿಂದಿರುಗುವಂತಾಯಿತು.   ನಂತರ ಆ ಯುವಕನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin