ಹುಟ್ಟುಹಬ್ಬದ ಸಂಭ್ರಮದಲ್ಲಿ ಲೂಸ್ ಮಾದ

Loos-Mada--01

ಬೆಂಗಳೂರು, ಜು.6- ಲೂಸ್ ಮಾದ ಯೋಗಿ ಇಂದು ಕೋಣನಕುಂಟೆಯ ತಮ್ಮ ನಿವಾಸದಲ್ಲಿ ಕುಟುಂಬಸ್ಥರು ಹಾಗೂ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ದುನಿಯಾ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಯೋಗಿ ನಂತರ ಅಲೆಮಾರಿ, ನಂದ ಲವ್ಸ್ ನಂದಿತಾ, ಸಿದ್ಲಿಂಗು, ಬಂಗಾರಿ, ಹುಡುಗರು, ಪುಂಡ, ಯಾರೇ ಕೂಗಾಡಲಿ, ಅಂಬಾರಿ ಸೇರಿದಂತೆ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ.

ಯೋಗಿ ಅಭಿನಯದ, ಆರ್.ಲಕ್ಷ್ಮಿನಾರಾಯಣ್ ಗೌಡರು ನಿರ್ಮಾಣದ ಕೋಲಾರ ಚಿತ್ರ ನಾಳೆ ಬಿಡುಗಡೆಗೊಳ್ಳಲಿದ್ದು, ಲಕ್ಷ್ಮಿನಾರಾಯಣ್ ಅವರು ಈ ಚಿತ್ರವನ್ನು ಯೋಗಿಗೆ ಬರ್ತ್‍ಡೇ ಕೊಡುಗೆಯಾಗಿ ನೀಡಿದ್ದಾರೆ. ಈ ಚಿತ್ರವು ಸುಮಾರು 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ. ಹುಟ್ಟುಹಬ್ಬದ ಪ್ರಯುಕ್ತ ಯೋಗಿಯ ಹೊಸ ಚಿತ್ರ ಆಲೋಚನೆ-ಆರಾಧನೆ ಚಿತ್ರದ ಪೋಸ್ಟರ್ ಬಿಡುಗಡೆಗೊಂಡಿದ್ದು , ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ ಹಾಗೂ ಶೀಘ್ರದಲ್ಲೇ ದುನಿಯಾ-2 ಚಿತ್ರ ಕೂಡ ತೆರೆಗೆ ಬರಲಿದೆ. ಯೋಗಿ ಅಭಿಮಾನಿಗಳು ಯೋಗಿ ನಿವಾಸಕ್ಕೆ ಬಂದು ಯೋಗಿ ಅವರಿಂದ ಕೇಕ್ ಕತ್ತರಿಸಿ ಸಂಭ್ರಮಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Sri Raghav

Admin