ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥನೆ
ಬೇಲೂರು, ಸೆ.23- ಜಮ್ಮು ಕಾಶ್ಮೀರದ ಸೇನಾ ನೆಲೆ ಮೇಲೆ ಉಗ್ರರು ನಡೆಸಿ ದಾಳಿಯಲ್ಲಿ ಹತರಾದ 18 ಸೈನಿಕರಿಗೆ ಲಯನ್ಸ್ ಸಂಸ್ಥೆ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯಿಂದ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮೇಣದ ಬತ್ತಿಗಳನ್ನಿಡಿದು ಆತ್ಮಕ್ಕೆ ಶಾಂತಿ ಕೋರಿದರು. ಲಯನ್ಸ್ ಸಂಸ್ಥೆ ಅಧ್ಯಕ್ಷ ಡಾ.ಸಂತೋಷ್ ಮಾತನಾಡಿ, ದೇಶದ ರಕ್ಷಣೆಗಾಗಿ ಗಡಿಯನ್ನು ಕಾಯುತ್ತಿದ್ದ ನಮ್ಮ ಸೈನಿಕರ ಸೇನಾ ನೆಲೆ ಮೇಲೆ ಉಗ್ರರು ನಡೆಸಿರುವ ದಾಳಿ ಖಂಡನೀಯ ಎಂದರು.
ಉಗ್ರರಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸ ಬೇಕಿದೆ. ಇಲ್ಲದಿದ್ದಲ್ಲಿ ನಮ್ಮ ದೇಶದ ಮೇಲೆ ನಿರಂತರವಾಗಿ ಉಗ್ರರು ದಾಳಿ ನಡೆಸಲು ಮುಂದಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಉಗ್ರ ಕ್ರಮ ಕೈಗೊಳ್ಳಬೇಕಿದೆ ಎಂದ ಅವರು, ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಬಲಿಯಾದ ಸೈನಿಕರ ಕುಟುಂಬಗಳಿಗೆ ಅವರ ಅಗಲಿಕೆಯ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸೋಣ ಎಂದು ತಿಳಿಸಿದರು.ಲಯನ್ಸ್ ಸಂಸ್ಥೆಯ ರಮೇಶ್, ಪೂವಯ್ಯ, ಮುಕ್ತಿಯಾರ್, ಡಾ.ಚಂದ್ರಮೌಳಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಗಾಯತ್ರಿ, ಪೊಲೀಸ್ ವೃತ್ತ ನಿರೀಕ್ಷಕ ಲೋಕೇಶ್, ಪಿಎಸ್ಐ ಸುರೇಶ್ ಇನ್ನಿತರರು ಇದ್ದರು.