ಹೂವಿನಹಡಗಲಿ ಪ್ರಭಾರಿ ಸಬ್‍ರಿಜಿಸ್ಟ್ರಾರ್ ಕಚೇರಿ-ನಿವಾಸದ ಮೇಲೆ ಬೆಳ್ಳಂಬೆಳಗ್ಗೆ ಎಸಿಬಿ ರೇಡ್

ACB--Raid

ಬಳ್ಳಾರಿ, ಮಾ.16- ಭ್ರಷ್ಟರ ವಿರುದ್ಧ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಬಳ್ಳಾರಿ ತಾಲೂಕಿನ ಹೂವಿನ ಹಡಗಲಿಯ ಪ್ರಭಾರಿ ಸಬ್‍ರಿಜಿಸ್ಟ್ರಾರ್ ಕೆ.ಮರಿಗಾದಿ ಅವರ ಮನೆ, ಕಚೇರಿ ಮುಂತಾದ ಕಡೆ ದಾಳಿ ನಡೆಸಿ ಅಪಾರ ಪ್ರಮಾಣದ ಚಿನ್ನಾಭರಣ, ಆಸ್ತಿ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ.  ದೊಡ್ಡ ಮಿಕವನ್ನೇ ಬಲೆಗೆ ಕೆಡವಿರುವ ಎಸಿಬಿ ಅಧಿಕಾರಿಗಳು ಹಗರಿ ಬೊಮ್ಮನಹಳ್ಳಿ, ಹೊಸಪೇಟೆ, ಹೂವಿನ ಹಡಗಲಿ ಮುಂತಾದ ಕಡೆ ಏಕಕಾಲದಲ್ಲಿ ಮರಿಗಾದಿ ಅವರ ಮನೆ, ಕಚೇರಿ ಮುಂತಾದ ಕಡೆ ದಾಳಿ ಮಾಡಿ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಎಸಿಬಿ ಎಸ್‍ಪಿ ಅನಿತಾ ಅದ್ದಣ್ಣನವರ್ ಹಾಗೂ ಡಿವೈಎಸ್‍ಪಿ ಗಿರೀಶ್ ನೇತೃತ್ವದಲ್ಲಿ ದಾಳಿ ನಡೆಸಿ ಪ್ರಭಾರ ಉಪನೋಂದಣಾಧಿಕಾರಿಯಾಗಿರುವ ಕೆ.ಮರಿಗಾದಿ ಅವರ ಸಂಬಂಧಿಕರ ಮನೆಗಳಲ್ಲೂ ಕೂಡ ಶೋಧ ನಡೆಸಿದ್ದಾರೆ.

ಸದ್ಯ ಹೂವಿನ ಹಡಗಲಿಯಲ್ಲಿ ಉಪನೋಂದಣಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿರುವ ಕಚೇರಿ ಮೇಲೂ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಹೊಸಪೇಟೆಯ ಬಸವೇಶ್ವರ ಬಡಾವಣೆ ನಿವಾಸದ ಮೇಲೂ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಳ್ಳಂಬೆಳಗ್ಗೆ ಆರಂಭವಾದ ದಾಳಿ ಸಂಜೆತನಕ ಮುಂದುವರಿದಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin