ಹೂವು ತರಲು ಹೋಗಿದ್ದ ಮಹಿಳೆಗೆ ಆಟೋ ಡಿಕ್ಕಿ
ಚೇಳೂರು, ಸೆ.6-ಜಮೀನಿನಿಂದ ಹೂವು ತರುತ್ತಿದ್ದ ಮಹಿಳೆಗೆ ಅತಿ ವೇಗವಾಗಿ ಬಂದ ಆಟೋ ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿರುವ ಘಟನೆ ಚೇಳೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಮಲ್ಲಮಾಚನಕುಂಟೆಯ ಕರಿಯಮ್ಮ (65) ಮೃತ ಮಹಿಳೆ.ಈಕೆ ನಿನ್ನೆ ತಮ್ಮ ಜಮೀನಿನಿಂದ ಹಬ್ಬಕ್ಕಾಗಿ ಹೂವು ತೆಗೆದುಕೊಂಡು ಬರುತ್ತಿದ್ದಾಗ ಅತಿ ವೇಗವಾಗಿ ಬಂದ ಆಟೋ ಡಿಕ್ಕಿ ಹೊಡೆದು ತೀವ್ರವಾಗಿ ಅಸ್ವಸ್ಥಗೊಂಡಿದ್ದರು ಆಕೆಯನ್ನು ಕೂಡಲೇ ಆ್ಯಂಬುಲೆನ್ಸ್ನಲ್ಲಿ ತುಮಕೂರಿನ ಸರ್ಕಾರಿ ಆಸ್ಪತ್ರೆಗ ರವಾನಿಸುತ್ತಿದ್ದಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಈ ಸಂಬಂಧ ಆಟೋ ಚಾಲಕ ರಂಗಪ್ಪ ಹಾಗೂ ಆಟೋವನ್ನು ಚೇಳೂರು ಪೊಲೀಸರು ವಶಪಡಿಸಿಕೊಂಡಿದ್ದು, ಪಿಎಸ್ಐ ನದಾಫ್ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.