ಹೃತಿಕ್ ಹಾಗೂ ರಾಕೇಶ್ ರೋಷನ್’ಗೆ ಕಂಗನಾ ಛೀಮಾರಿ
ಬಾಲಿವುಡ್ನ ಇನ್ನಿಬ್ಬರು ಸೂಪರ್ ಸ್ಟಾರ್ಗಳಾದ ಹೃತಿಕ್ ರೋಷನ್ ಮತ್ತು ಕಂಗನಾ ರನೌಟ್ ನಡುವೆ ಹಗ್ಗ-ಜಗ್ಗಾಟ ಕೊನೆಗೊಳ್ಳುವ ಲಕ್ಷಣ ಕಂಡುಬರುತ್ತಿಲ್ಲ. ಬಿ ಟೌನ್ನ ಫೈರ್ ಬ್ರಾಂಡ್ ಅಲಿಯಾಸ್ ಬಾಯಿ ಬಡಕಿ ಎಂದೇ ಗುರುತಿಸಿಕೊಂಡಿರುವ ಕಂಗನಾ ಮತ್ತೊಮ್ಮೆ ಹೃತಿಕ್ ಮೇಲೆ ಮುಗಿಬಿದ್ದಿದ್ದಾಳೆ.ಸಾಲದ್ದಕ್ಕೆ ಆತನ ಅಪ್ಪನ (ರಾಕೇಶ್ ರೋಷನ್) ಮೇಲೂ ವಾಗ್ದಾಳಿ ನಡೆಸಿದ್ದಾಳೆ. ಮುಂಬೈನಲ್ಲಿ ಖ್ಯಾತ ಲೇಖಕ ಚೇತನ್ ಭಗತ್ರ ಹೊಸ ಕಾದಂಬರಿ ಒನ್ ಇಂಡಿಯನ್ ಗರ್ಲ್ ಬಿಡುಗಡೆ ನಡೆದಿತ್ತು. ಬೋಲ್ಡ್ ಗರ್ಲ್ ಕಂಗನಾ ಹಾಜರಾಗಿದ್ದಳು. ಸುದ್ದಿದಾಹಿ ಸಿನಿ ಪತ್ರಕರ್ತರು ನಿಮ್ಮಿಬ್ಬರ ಜಗಳದ ನಡುವೆ ರಾಕೇಶ್ ಮಧ್ಯೆ ಬಂದಿದ್ದಾರಲ್ಲ ಎಂದು ಪ್ರಶ್ನಿಸಿದ್ದೇ ತಡ, ಅಪ್ಪ-ಮಗನಿಗೆ ಛೀಮಾರಿ ಹಾಕಿದಳು.
ಭಾರತದ ಗಂಡಸರು ತಮ್ಮನ್ನು ತಾವು ಸಮರ್ಥಿಸಿ ಕೊಳ್ಳದೆ ತಂದೆಯನ್ನು ಮಧ್ಯಕ್ಕೆ ಏಕೆ ತರುತ್ತಾರೋ ಗೊತ್ತಿಲ್ಲ. ಆತನಿಗೆ (ಹೃತಿಕ್) 43 ವರ್ಷ ವಯಸ್ಸಾಗಿದೆ. ಈಗಲೂ ತನ್ನನ್ನು ರಕ್ಷಿಸಿಕೊಳ್ಳಲು ಅಪ್ಪನ ಅಗತ್ಯ ಇದೆಯೇ ಎಂದು ಕಂಗನಾ ಖಾರವಾಗಿ ಪ್ರಶ್ನಿಸಿದ್ದಾಳೆ.ಆತನ ತಂದೆಗೆ (ರಾಕೇಶ್ ರೋಷನ್) ಬುದ್ಧಿ ಇಲ್ವಾ. ಈ ವಿಷಯದಲ್ಲಿ ಮಗನ ಬೆಂಬಲಕ್ಕೆ ಬರಲು ನಾಚಿಕೆ ಆಗಲ್ವಾ ಎಂದು ಛೇಡಿಸಿದ್ದಾಳೆ. ಈ ವರ್ಷದ ಆರಂಭದಿಂದಲೂ ಇವರಿಬ್ಬರ ನಡುವೆ ಸ್ಟಾರ್ವಾರ್ ನಡೆಯುತ್ತಿದೆ. ಕದನ ವಿರಾಮ ಯಾವಾಗ? ಗೊತ್ತಿಲ್ಲ…