ಹೃದಯಾಘಾತದಿಂದ ಕರ್ತವ್ಯದಲ್ಲಿದ್ದ ಬಸ್ ಚಾಲಕ ಸಾವು

Bus-Driver--01

ಬೆಳಗಾವಿ, ಜೂ.5-ಕರ್ತವ್ಯ ನಿರತ ಚಾಲಕರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದು, ಇದಕ್ಕೆ ಡಿಪೋ ಮ್ಯಾನೇಜರ್ ಕಾರಣ ಎಂದು ಚಾಲಕರು ಮತ್ತು ನಿರ್ವಾಹಕರು ಧರಣಿ ನಡೆಸಿದ್ದಾರೆ. ಎಂ.ಎಸ್.ಖಾಗಜಿ ಮೃತಪಟ್ಟ ಚಾಲಕ. ಖಾಗಜಿ ಅವರು ಎದೆ ನೋವು ಇದೆ. ರಜೆ ನೀಡಿ ಎಂದು ಡಿಪೋ ಮ್ಯಾನೇಜರ್ ಆರ್.ಬಿ.ರೋಗಿ ಅವರನ್ನು ಕೇಳಿದ್ದಾರೆ. ಆದರೂ ಕರ್ತವ್ಯ ನಿರ್ವಹಿಸುವಂತೆ ಹೇಳಿದ್ದರಿಂದ ಈ ದುರಂತ ನಡದಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.ಖಾಗಜಿ ಅವರು ನಿನ್ನೆ ಸಂತಿಬಸ್ತಿವಾಪದಿಂದ ಬೆಳಗಾವಿಗೆ ಸಾರಿಗೆ ಬಸ್ ಚಲಾಯಿಸುತ್ತಿದ್ದ ವೇಳೆ ಹೃದಯಾಘಾತವಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಖಗಜಿ ಅವರ ಸಾವಿಗೆ ಡಿಪೋ ಮ್ಯಾನೇಜರ್ ರಜೆ ನೀಡದೇ ಇರುವುದೇ ಕಾರಣ ಎಂದು ಆರೋಪಿಸಿ ಸಿಬಿಟಿಯಲ್ಲಿ ಚಾಲಕರು ಹಾಗೂ ನಿರ್ವಾಹಕರು ಧರಣಿ ನಡೆಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin