ಹೃದಯಾಘಾತದಿಂದ ಕರ್ತವ್ಯನಿರತ ಸೇನಾಧಿಕಾರಿ ಸಾವು

heart-problem

ವಿಜಯಪುರ,ಮೇ 14-ಬೆಂಗಳೂರಿನಲ್ಲಿ ಕರ್ನಲ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸೇನಾಧಿಕಾರಿ ಕರ್ತವ್ಯದ ವೇಳೆಯೇ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೂಲತಃ ವಿಜಯಪುರ ಜಿಲ್ಲೆಯ ಸಿಂಧಗಿ ತಾಲ್ಲೂಕಿನ ಓತಹಾಳ ಗ್ರಾಮದ ಸಂಗನಗೌಡ ಬಸಣ್ಣಗೌಡ ಕೊಣ್ಣೂರ(59) ಮೃತಪಟ್ಟ ಸೇನಾಧಿಕಾರಿ. ಶುಕ್ರವಾರ ಕರ್ತವ್ಯದಲ್ಲಿದ್ದಾಗ ಸಂಗನಗೌಡ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ.
ಇಂದು ಬೆಳಗ್ಗೆ 5.30ಕ್ಕೆ ವೀರಸೇನಾಧಿಕಾರಿಯ ಮೃತ ದೇಹ ಸ್ವಗ್ರಾಮಕ್ಕೆ ಆಗಮಿಸಿದ್ದು , ಸಂಜೆ ಸ್ವಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಯೆ ನಡೆಯಲಿದೆ. ಸಚಿವ ಎಂ.ಬಿ.ಪಾಟೀಲ್, ಸಿಂಧಗಿ ಶಾಸಕ ರಮೇಶ್ ಬೂಸನೂರ, ಮಾಜಿ ಸಚಿವ ಎಂ.ಸಿ.ಮನಗೂಳಿ ಹುತಾತ್ಮರ ಅಂತಿಮ ದರ್ಶನ ಪಡೆದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin