ಹೃದಯಾಘಾತ : ಸಾರಿಗೆ ಬಸ್ ಚಾಲಕ ಸಾವು
ವಿಜಯಪುರ, ಅ.7- ಕರ್ತವ್ಯ ನಿರತ ಕೆಎಸ್ಆರ್ಟಿಸಿ ಬಸ್ ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಗುತ್ತರಗಿ ಗ್ರಾಮದ ಬಳಿ ನಡೆದಿದೆ.ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮದ ವಿಠೋಬ ತಳವಾರ(36) ಮೃತ ಚಾಲಕ.ಸಿಂಧಗಿಯಿಂದ ಗುತ್ತರಗಿ ಗ್ರಾಮಕ್ಕೆ ಬಸ್ ಚಲಾಯಿಸುವಾಗ ಹೃದಯಾಘಾತ ಸಂಭವಿಸಿ ಬಸ್ನಲ್ಲೇ ಅವರು ಮೃತಪಟ್ಟಿದ್ದಾರೆ.ಸುದ್ದಿ ತಿಳಿದ ಸಿಂಧಗಿ ಘಟಕ ವ್ಯವಸ್ಥಾಪಕ ಸಿ.ಕೃಷ್ಣಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂಬಂಧ ಸಿಂಧಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.