ಹೆಂಗಳೆಯರ ಮನಗೆದ್ದ ಬಚ್ಚನ್

amithab--bachan

ಹೆಣ್ಣು ಮಕ್ಕಳು ನಿಜಕ್ಕೂ ಈ ಜಗತ್ತಿಗೆ ಅತ್ಯುತ್ತಮ ಕೊಡುಗೆ. ಪ್ರತಿಯೊಬ್ಬರೂ ಅವರನ್ನು ಗೌರವಿಸಬೇಕು-ಹೀಗೆ ಹೆಣ್ಣುಮಕ್ಕಳ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿ ಹೆಂಗಳೆಯರ ಮನಗೆದ್ದಿದ್ದಾರೆ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್. ಹೆಣ್ಣು ಮಕ್ಕಳು ನಮಗೆ ಅತ್ಯುತ್ತಮ ಬಳುವಳಿ.. ನನ್ನ ಮಗಳು ನನ್ನ ಪಾಲಿಗೆ ಜಗತ್ತಿನ ಅತ್ಯಂತ ಸುಂದರ ಹೆಣ್ಣು ಮಗಳು. ಪ್ರತಿಯೊಬ್ಬರೂ ಹೆಣ್ಣುಮಕ್ಕಳನ್ನು ಪ್ರೀತಿ-ಗೌರವದಿಂದ ಕಾಣಬೇಕು ಎಂದು ಬಿಗ್-ಬಿ ಟ್ವೀಟರ್‍ನಲ್ಲಿ ಹೇಳಿದ್ದಾರೆ. ಪುತ್ರಿಯರು ನನಗೆ, ನನ್ನ ಸಮಾಜಕ್ಕೆ ಮತ್ತು ಇಡೀ ದೇಶಕ್ಕೆ ತುಂಬಾ ವಿಶೇಷವಾದವರು ಎಂದು ಬಚ್ಚನ್ ಇನ್ನೊಂದು ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ತಮಗೆ ಲಭಿಸಿರುವ ಸ್ಟಾನ್ ಸ್ಕ್ರೀನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ನನ್ನ ಮಗಳು ಶ್ವೇತಾ ನಂದಾಳಿಗೆ ಸಮರ್ಪಿಸುವುದಾಗಿ ಎಬಿ ಹೇಳಿದ್ದಾರೆ. ಹೆಣ್ಣುಮಕ್ಕಳು ಎಲ್ಲದರಲ್ಲೂ ಅತ್ಯುತ್ತಮರು. ನನಗೆ ಸಂದಿರುವ ಈ ಪ್ರಶಸ್ತಿಯನ್ನು ಶ್ವೇತಾಳಿಗೆ ಅರ್ಪಿಸುತ್ತೇನೆ. ಆಕೆ ನನ್ನ ಪಾಲಿಗೆ ಅತ್ಯಂತ ಸುಂದರ ಮಗಳಾಗಿದ್ಧಾಳೆ ಎನ್ನುತ್ತಾರೆ ಬಚ್ಚನ್.

 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin