ಹೆಂಡತಿಯ ಮೇಲಿನ ಅನುಮಾನಕ್ಕೆ ಬಿತ್ತು 5 ಹೆಣಗಳು..!

Spread the love

Kampli

ಕಂಪ್ಲಿ, ಫೆ.26 : ವ್ಯಕ್ತಿಯೊಬ್ಬ ತನ್ನ ಪತ್ನಿ, ಮೂವರು ಮಕ್ಕಳು ಮತ್ತು ನಾದಿನಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಭೀಭತ್ಸ ಘಟನೆ ಶನಿವಾರ ರಾತ್ರಿ ಹೊಸಪೇಟೆ ತಾಲೂಕಿನ ಕಂಪ್ಲಿಯಲ್ಲಿ ನಡೆದಿದೆ. ಕೊಲೆ ಮಾಡಿದ ಭೂಪ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ವಿಷಯ ತಿಳಿಸಿ ಶರಣಾಗಿದ್ದಾನೆ.  ತನ್ನ ಹೆಂಡತಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದ ಭೂತ ಆವರಿಸಿಕೊಂಡಿದ್ದ ತಿಪ್ಪಯ್ಯ, ಪತ್ನಿ ಮತ್ತು ಪತ್ನಿಯ ತಂಗಿ, ತನ್ನ ಮೂವರು ಮಕ್ಕಳೂ ಸೇರಿ ಐದು ಮಂದಿಯನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ಹೊಸಪೇಟೆ ತಾಲೂಕಿನ ಕಂಪ್ಲಿ ಪಟ್ಟಣದ ಚಪ್ಪರದಳ್ಳಿಯಲ್ಲಿರುವ ತಿಪ್ಪಯ್ಯನ ಮನೆಯಲ್ಲಿ ಈ ಕೃತ್ಯ ನಡೆದಿದ್ದು ಮೃತರನ್ನು ತಿಪ್ಪಯ್ಯನ ಪತ್ನಿ ಫಕೀರಮ್ಮ (36), ಪತ್ನಿ ತಂಗಿ ಗಂಗಮ್ಮ(30), ತಿಪ್ಪಯ್ಯನ ಮಕ್ಕಳಾದ , ಮಗ ರಾಜು(8), ಬಸಮ್ಮ (10) ಎಂದು ಗುರುತಿಸಲಾಗಿದೆ. ಇನ್ನೊಬ್ಬ ಮಗಳು ಪವಿತ್ರಾ (6) ತೀವ್ರವಾಗಿ ಗಾಯ ಗೊಂಡಿದ್ದು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಆಕೆಯೂ ರಾತ್ರಿ 10.30 ರ ಸುಮಾರಿಗೆ ಮೃತಪಟ್ಟಿದ್ದಾಳೆ.  ತಿಪ್ಪಯ್ಯ ಹಾಗೂ ಫಕೀರಮ್ಮ ಅವರ ಮತ್ತೊಬ್ಬ ಮಗಳು ರಾಜೇಶ್ವರಿ(12) ತನ್ನ ಸಂಬಂಧಿಕರ ಮನೆಗೆ ಹೋಗಿದ್ದರಿಂದ ಆಕೆಯ ಜೀವ ಉಳಿದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin