ಹೆಚ್ಡಿಕೆ ನಿವಾಸಕ್ಕೆ ಡಿಕೆಶಿ ಭೇಟಿ
ಬೆಂಗಳೂರು. ಅ.27 : ಹೆಚ್.ಡಿ.ಕುಮಾರಸ್ವಾಮಿ ನಿವಾಸಕ್ಕೆ ಸಚಿವ ಡಿ.ಕೆ.ಶಿವಕುಮಾರ್ ಭೇಟಿ ನೀಡಿದ್ದರು. ಅ.30ರಂದು ವಿದ್ಯುತ್ ಖರೀದಿ ಹಗರಣ ಸಂಬಂಧ ಸದನ ಸಮಿತಿಯ ವರದಿ ಸಲ್ಲಿಸುವ ವೇಳೆ ಎಲ್ಲಾ ಸದಸ್ಯರ ಸಹಿ ಅಗತ್ಯವಿದ್ದು, ಹೀಗಾಗಿ ಹೆಚ್.ಡಿ.ಕುಮಾರಸ್ವಾಮಿ ಸಹಿ ಪಡೆಯಲು ಬೆಂಗಳೂರಿನ ಜೆಪಿ ನಗರದ ಕುಮಾರಸ್ವಾಮಿ ನಿವಾಸಕ್ಕೆ ಡಿಕೆಶಿ ಭೇಟಿ ನೀಡಿದ್ದರು. ಈ ಹಿಂದೆ ಸದನ ಸಮಿತಿ ಸದಸ್ಯ ಸ್ಥಾನಕ್ಕೆ ಹೆಚ್ಡಿಕೆ ರಾಜೀನಾಮೆ ನೀಡಿದ್ದರು.
ಆದರೆ ಹೆಚ್.ಡಿ.ಕುಮಾರಸ್ವಾಮಿ ರಾಜೀನಾಮೆ ಅಂಗೀಕಾರವಾಗಿರಲಿಲ್ಲ. ಸದಸ್ಯರಾಗಿ ಹೆಚ್ಡಿಕೆ ಮುಂದುವರಿದಿರುವ ಕಾರಣ ವರದಿಗೆ ಸಹಿ ಹೆಚ್ಡಿಕೆ ಅಗತ್ಯ.
ಹೀಗಾಗಿ ಹೆಚ್.ಡಿ.ಕುಮಾರಸ್ವಾಮಿ ನಿವಾಸಕ್ಕೆ ಭೇಟಿ ನೀಡರು. ಇದೆ ವೇಳೆ ಹೆಚ್.ಡಿ.ಕುಮಾರಸ್ವಾಮಿ ಆರೋಗ್ಯವನ್ನೂ ಕೂಡ ವಿಚಾರಿಸಿದರು.
Facebook Comments