‘ಹೆಬ್ಬುಲಿ’ ಟ್ರೈಲರ್ ಬಂತು ನೋಡಿ

ಕಿಚ್ಚ ಸುದೀಪ್ ಹುಟ್ಟುಹಬ್ಬದಂದು ಹೆಬ್ಬುಲಿ ಚಿತ್ರದ ಟ್ರೈಲರ್ ರಿಲೀಸ್ ಮಾಡಿ ಅಭಿಮಾನಿಗಳೇ ಗಿಫ್ಟ್ ನೀಡಿದ್ದಾರೆ.   ಇಂದು ಹುಟ್ಟುಹಬ್ಬ ಆಗಿರುವುದರಿಂದ ಸುದೀಪ್ ಹೊಸ ಚಿತ್ರ ‘ಹೆಬ್ಬುಲಿ’ಯ ಟ್ರೇಲರ್ ರಿಲೀಸ್ ಆಗಿದೆ. ಸುದೀಪ್ ಈ ಚಿತ್ರದಲ್ಲಿ ಮೊದಲ ಬಾರಿಗೆ ಬ್ಲಾಕ್ ಕಮಾಂಡೋ ಪಾತ್ರದಲ್ಲಿ ಮಿಂಚಿದ್ದಾರೆ. ಸ್ಯಾಂಡಲ್‌‌ವುಡ್ ಪಾಲಿಗೆ ಹೊಸ ಬಗೆಯ ಪ್ರಯತ್ನ ಎನ್ನುವಂಥ ರೋಚಕ ಕತೆ ಮತ್ತು ಸಾಹಸ ಈ ಚಿತ್ರದ ಹೈಲೈಟ್ಸ್ ಎನ್ನಲಾಗ್ತಿದೆ.  ಸುದೀಪ್ ಜೊತೆ ಅಮಲಾ ಪಾಲ್, ರವಿಚಂದ್ರನ್, ರವಿಶಂಕರ್, ರವಿಕಿಶನ್, ಚಿಕ್ಕಣ್ಣ ಮುಂತಾದವರ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ. ಅರ್ಜುನ್ ಜನ್ಯಾ ಸಂಗೀತ ಈ ಚಿತ್ರದ ಮತ್ತೊಂದು ಹೈಲೈಟ್. ಹೆಬ್ಬುಲಿಯ ಕಥೆ ಮತ್ತು ನಿರ್ದೇಶನದ ಜವಾಬ್ದಾರಿ ಕೃಷ್ಣರದ್ದು. ಬರ್ತಡೇ ಬಾಯ್ ಕಿಚ್ಚನಂತೂ ಟ್ರೇಲರ್‌‌ನಲ್ಲಿ ವಿಜೃಂಭಿಸಿದ್ದಾರೆ.

► Follow us on –  Facebook / Twitter  / Google+

Sri Raghav

Admin