ಹೆಲಿಕಾಪ್ಟರ್ ನಲ್ಲಿ ಕೂತು ನೀವು ಮೈಸೂರು ದಸರಾ ನೋಡಬಹುದು

Helica

ಮೈಸೂರು, ಸೆ.28– ವಿಶ್ವವಿಖ್ಯಾತ ದಸರಾ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮ ಅ.1ರಂದು ನಡೆಯಲಿದ್ದು, ಅಂದು ಬೆಳಗ್ಗೆ 11.40ಕ್ಕೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ದಸರಾ ಉತ್ಸವಕ್ಕೆ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಿಯ ಸನ್ನಿದಿಯಲ್ಲಿ ಖ್ಯಾತ ಸಾಹಿತಿ ಡಾ.ಚೆನ್ನವೀರ ಕಣವಿ ಅವರು ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಮಹೋತ್ಸವದ ಆಕರ್ಷಣೀಯ ಕೇಂದ್ರ ಬಿಂದುವಾದ ಜಂಭುಸವಾರಿ ಮೆರವಣಿಗೆಯು ಅ.11ರ ವಿಜಯ ದಶಮಿ ದಿನದಂದು ಮಧ್ಯಾಹ್ನ 2.16ಕ್ಕೆ ಅರಮನೆ ಬಲಭಾಗದ ದ್ವಾರದಲ್ಲಿ ನಂದಿಧ್ವಜಕ್ಕೆ ಪೂಜೆಸಲ್ಲಿಸಿ ನಂತರ 2.45ರ ಶುಭ ಮಕರ ಲಗ್ನದಲ್ಲಿ ಚಾಲನೆ ನೀಡಲಾಗುವುದು. ಅದೇ ದಿನ ಸಂಜೆ ಬನ್ನಿಮಂಟಪದಲ್ಲಿ ರಾತ್ರಿ 8ಕ್ಕೆ ನಡೆಯಲಿರುವ ಪಂಜಿನ ಕವಾಯತ್‍ನಲ್ಲಿ ರಾಜ್ಯಪಾಲ ವಜುಬಾಯಿ ವಾಲಾ ಅವರು ಗೌರವ ವಂದನೆ ಸ್ವೀಕರಿಸಲಿದ್ದಾರೆ ಎಂದು ಹೇಳಿದರು.

ಪ್ರತಿ ವರ್ಷಕ್ಕಿಂತ ಈ ಬಾರಿ ಸ್ತಂಭಚಿತ್ರ ಹಾಗೂ ಕಲಾತಂಡಗಳನ್ನು ಕಡಿತಗೊಳಿಸಲಾಗಿದ್ದು, ಜಂಭುಸವಾರಿ ಮೆರವಣಿಗೆಯಲ್ಲಿ 36 ಸ್ತಂಭ ಚಿತ್ರಗಳು, 30 ಕಲಾ ತಂಡಗಳು ಮಾತ್ರ ಭಾಗವಹಿಸಲಿವೆ ಎಂದರು.  ಪಂಜಿನ ಕವಾಯತ್ ವೀಕ್ಷಿಸಲು ಅನುಕೂಲವಾಗುವ ನಿಟ್ಟನಲ್ಲಿ ಪಂಜಿನ ಕವಾಯತ್ ನೇರ ಪ್ರಸಾರವನ್ನು ಚಾಮುಂಡಿ ವಿಹಾರ ಕ್ರೀಡಾಂಗಣ ಮತ್ತು ಮೈಸೂರು ವಿವಿ ಬಯಲು ರಂಗಮಂದಿರದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಬಾರಿ ಆಗಸದಿಂದ ಮೈಸೂರು ಎಂಬ ನೂತನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಹೆಲಿಕಾಪ್ಟರ್ ಮೂಲಕ ಮೈಸೂರು ವೀಕ್ಷಣೆಗೆ 10 ನಿಮಿಷಗಳು ಅವಕಾಶ ಕಲ್ಪಿಸಲಾಗಿದ್ದು, ವಯಸ್ಕರಿಗೆ 2,499, ಮಕ್ಕಳಿಗೆ ಹಾಗೂ ವಿಕಲಚೇತನರಿಗೆ 2,299 ರೂ. ನಿಗದಿ ಮಾಡಲಾಗಿದೆ ಎಂದರು.

ಹಾಗೆ ಪ್ಯಾಲೇಸ್ ಆನ್ ವಿಲ್ಸ್ ಕಾರ್ಯಕ್ರಮದಮೂಲಕ ಮೈಸೂರಿನಲ್ಲಿರುವ 8 ಅರಮನೆಗಳ ವೀಕ್ಷಣೆ ಮಾಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ಸಚಿವರು ದಸರಾ ಗೋಲ್ಡ್ ಕಾರ್ಡ್ ಬಿಡುಗಡೆ ಮಾಡಿದರು. ಈ ಬಾರಿ ಒಂದು ಸಾವಿರ ದಸರಾ ಗೋಲ್ಡ್ ಕಾರ್ಡ್‍ಗಳನ್ನು ಮುದ್ರಿಸಲಾಗಿದೆ. ಒಂದು ಗೋಲ್ಡ್ ಕಾರ್ಡ್‍ಗೆ 7500ರೂ.ನಿಗದಿಗೊಳಿಸಲಾಗಿದ್ದು, ಒಂದು ಕಾರ್ಡ್‍ಗೆ ಇಬ್ಬರು ವಯಸ್ಕರು 7, 6 ವರ್ಷದೊಳಗಿನ ಒಂದು ಮಗುವಿಗೆ ಮಾತ್ರ ಅವಕಾವಿರುತ್ತದೆ ಎಂದು ತಿಳಿಸಿದರು. ದಸರಾ ಗೋಲ್ಡ್ ಕಾರ್ಡ್‍ನ್ನು ಆನ್‍ಲೈನ್ ಮೂಲಕವು ಬುಕ್ ಮಾಡಬಹುದಾಗಿದೆ. ಹಾಗೆ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಕೌಂಟರ್‍ನಲ್ಲಿಯೂ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.

► Follow us on –  Facebook / Twitter  / Google+

Sri Raghav

Admin