ಹೇಮಾವತಿ ನೀರು ಹರಿಸಲು ರೈತ ಸಂಘದ ಒತ್ತಾಯ

turvejere4

ತುರುವೇಕೆರೆ, ಅ.10- ಹೇಮಾವತಿ ನೀರನ್ನು ತಾಲೂಕಿನ ಎಲ್ಲಾ ಕೆರೆಗಳಿಗೂ ಕೂಡಲೇ ಹರಿಸಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಅಧ್ಯಕ್ಷ ಶ್ರೀನಿವಾಸ್‍ಗೌಡ, ಗೌರವಾಧ್ಯಕ್ಷ ಅಸ್ಲಾಂ ಪಾಷ ಒತ್ತಾಯಿಸಿದರು.ಪಟ್ಟಣದ ಹೇಮಾವತಿ ಅಭಿಯಂತರ ಕಚೇರಿ ಮುಂಭಾಗ ರೈತರೊಂದಿಗೆ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಈ ಭಾರಿ ಸಕಾಲಕ್ಕೆ ಮಳೆಯಾಗದ ಹಿನ್ನಲೆಯಲ್ಲಿ ಕೆರೆ-ಕಟ್ಟೆಗಳು ನೀರಿಲ್ಲದೇ ಒಣಗುತ್ತಿವೆ. ಇನ್ನು ಕೆಲವೇ ದಿನಗಳಲ್ಲಿ ದನ ಕರುಗಳಿಗೂ ನೀರು ಸಿಗದಂತ ಪರಿಸ್ಥಿತಿ ಉಂಟಾಗಲಿದೆ ಎಂದು ಹೇಳಿದರು.
ಕಳೆದ 1 ತಿಂಗಳ ಹಿಂದೆ ತಾಲೂಕಿನ ಕೆರೆಕಟ್ಟೆಗಳಿಗೆ ನೀರು ಹರಿಸುವಂತೆ ರೈತ ಮುಖಂಡರೊಡಗೂಡಿ ಹೇಮಾವತಿ ಅಧೀಕ್ಷಕ ಎಂಜಿನಿಯರವರನ್ನು ಭೇಟಿ ಮಾಡಿ ಮನವಿ ಮಾಡಲಾಗಿತ್ತು.

 

 

ಆ ವೇಳೆ ರೈತ ಮುಖಂಡರ ಮನವಿಗೆ ಸ್ಪಂದಿಸಿದ್ದ ಅವರುಸೆ. 15 ರಂದು ಕೆರೆಕಟ್ಟೆಗಳಿಗೆ ನೀರು ಹರಿಸುವುದಾಗಿ ಭರವಸೆ ನೀಡಿದ್ದರು.
ಆದರೆ ಹೇಮಾವತಿ ನೀರನ್ನು ನಿಲ್ಲಿಸಲಾಗಿತ್ತು. ಸದ್ಯ ನಾಲೆಗಳಲ್ಲಿ ನೀರು ಹರಿಯುತ್ತಿದ್ದು ಅಧಿಕಾರಿಗಳು ಮಾತು ಕೊಟ್ಟಂತೆ ಕೂಡಲೇ ತಾಲೂಕಿನ ಕೆರೆಕಟ್ಟೆಗಳಿಗೆ ನೀರು ಹರಿಸಬೇಕು ಇಲ್ಲವಾದರೆ ಹೇಮಾವತಿ ಇಲಾಖೆಯ ಕಛೇರಿಗೆ ಬೀಗ ಜಡಿದು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.ಜಾಪರ್, ಯೊಗೇಶ್, ಚಂದ್ರಶೇಖರ್, ನಿತೀನ್, ಉಪೇಂದ್ರ, ಶಾಶಂಕ, ಚಂದು, ಭರತ್,ಅಕ್ಷಯ್, ಪುನಿತ್, ಪುಟ್ಟರಾಜು ಸೇರಿದಂತೆ ಇತರರು ಇದ್ದರು.

 

► Follow us on –  Facebook / Twitter  / Google+

Sri Raghav

Admin