ಹೈದರಾಬಾದ್-ಕರ್ನಾಟಕ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧ

Spread the love

Siddaramaiah-Session

ಬೆಂಗಳೂರು, ಮಾ.23- ನಮ್ಮ ಸರ್ಕಾರದ ಅವಧಿಯಲ್ಲಿ ಹಿಂದುಳಿದಿರುವ ಹೈದರಾಬಾದ್-ಕರ್ನಾಟಕ ಪ್ರಾದೇಶಿಕ ಅಸಾಮಾನತೆಯನ್ನು ಹೋಗಲಾಡಿಸಿ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿಂದು ತಿಳಿಸಿದ್ದಾರೆ.  ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಅಮರ್‍ನಾಥ್ ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಹಿಂದುಳಿದ ಹೈ-ಕ ಅಭಿವೃದ್ಧಿಪಡಿಸಲು ಸಂವಿಧಾನದ 371(ಜೆ) ಕಾಯ್ದೆ ತಿದ್ದುಪಡಿ ಮಾಡಲಾಗಿದೆ. ಡಾ. ನಂಜುಂಡಯ್ಯ ವರದಿಯಂತೆ ಹಿಂದುಳಿದ ಹೈ-ಕ ಪ್ರದೇಶವನ್ನು ಪ್ರಾದೇಶಿಕ ಅಸಾಮಾನತೆಯನ್ನು ಹೋಗಲಾಡಿಸಲು ನಾವು ಪ್ರಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.

ಈ ಭಾಗದ ಉದ್ಯೋಗ ಸೇರಿದಂತೆ ಎಲ್ಲಾ ರೀತಿಯ ಅಗತ್ಯ ಕ್ರಮಕೈಗೊಳ್ಳಲಾಗುವುದು, ಹೈ-ಕ ಅಭಿವೃದ್ಧಿ ಮಂಡಳಿಗೆ ಕಳೆದ 5 ವರ್ಷಗಳಲ್ಲಿ 315 ಕೋಟಿ. ರೂ ಹಣ ನೀಡಲಾಗಿತ್ತು. ನಮ್ಮ ಸರ್ಕಾರ ಬಂದ ಮೇಲೆ 4500 ಕೋಟಿ ರೂ ಹಣ ನೀಡಿದ್ದೇವೆ. ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ 1 ಸಾವಿರ ಕೋಟಿ ರೂ. ಹಣ ಮೀಸ ಲಿಟ್ಟಿದ್ದೇವೆ ಎಂದು ವಿವರಿಸಿದರು.  371(ಜೆ) ಕಾಯ್ದೆಗೆ ತಿದ್ದುಪಡಿ ಮಾಡಿದ ನಂತರ ಪ್ರತಿ ವರ್ಷ ಇಲ್ಲಿ ಹೊಸದಾಗಿ 6000 ಸಾವಿರ ಇಂಜಿನಿಯರ್, ವೈದ್ಯಕೀಯ ಹುದ್ದೆಗಳು ಸೃಷ್ಠಿಯಾಗುತ್ತದೆ. ಈ ಭಾಗದಲ್ಲಿ ಒಟ್ಟು 5 ಲಕ್ಷ ಉದ್ಯೋಗ ಸೃಷ್ಠಿ ಮಾಡುವ ಗುರಿ ಇದೆ. ಹೈ-ಕ ಭಾಗದ ಆರು ಜಿಲ್ಲೆಗಳಲ್ಲಿ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ 5371 ಅಭ್ಯರ್ಥಿಗಳು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ. ಬೇಡಿಕೆಗೆ ತಕ್ಕಂತೆ ಉದ್ಯೋಗ ಸೃಷ್ಠಿಸುವ ಗುರಿ ಸರ್ಕಾರಕ್ಕೆ ಇದೆ ಎಂದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin