ಹೊಗೆಸೊಪ್ಪು ಬ್ಯಾರಲ್ ಮನೆಗೆ ಬೆಂಕಿ : 4 ಲಕ್ಷ ಹಾನಿ

Spread the love

arakalagudu--firing--in-hom

ಅರಕಲಗೂಡು, ಆ.29- ಹೊಗೆಸೊಪ್ಪುಹದಗೊಳಿಸುತ್ತಿದ್ದ ಬ್ಯಾರಲ್ ಮನೆಗೆ ಬೆಂಕಿ ಬಿದ್ದು ಹಾನಿಗೀಡಾದ ಘಟನೆ ತಾಲೂಕಿನ ಬನ್ನೂರು ಸಂತೆಮಾಳದಲ್ಲಿ ನಡೆದಿದೆ.ಗ್ರಾಮದ ಕಾಶಿಪತಿ ಎಂಬುವವರಿಗೆ ಸೇರಿದ ಬ್ಯಾರಲ್ ಮನೆ ಬೆಂಕಿಗೆ ಆಹುತಿಯಾಗಿದೆ. ತಂಬಾಕು ಹದಗೊಳಿಸುತ್ತಿದ್ದಾಗ ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಮನೆ ಪೂರ್ತಿ ಹಾನಿಯಾಗಿದೆ.ಪರಿಣಾವಾಗಿ ಬ್ಯಾರಲ್ ಮನೆಗೆ ಹಾಕಿದ್ದ 400 ಕರಕಡ್ಡಿಗಳಲ್ಲಿನ ಹೊಗೆಸೊಪ್ಪು ಹಾಗೂ ಮನೆ ಮೇಲ್ಚಾವಣಿ ಸುಟ್ಟು ಹಾಳಾಗಿದ್ದು , 4 ಲಕ್ಷ ರೂ ನಷ್ಟವಾಗಿದೆ ಎಂದು ರೈತ ಕಾಶಿಪತಿ ಅಳಲು ತೋಡಿಕೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin