ಹೊಯ್ಸಳ ವೃತ್ತ ನಾಮಕರಣಕ್ಕೆ ಒತ್ತಾಯ
ಬೇಲೂರು, ಸೆ.1- ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ಹಿಂಭಾಗದ ಜೆಪಿ ನಗರದ ವೃತ್ತಕ್ಕೆ ಹೊಯ್ಸಳ ವೃತ್ತ ಎಂದು ನಾಮಕರಣ ಮಾಡಬೇಕೆಂದು ಒತ್ತಾಯಿಸಿ ಹೊಯ್ಸಳ ಕಲಾ ತಂಡ ಹಾಗೂ ಜೆಪಿ ನಗರದ ನಿವಾಸಿಗಳು ಪುರಸಭಾ ಕಂದಾಯಾಧಿಕಾರಿ ಬಸವರಾಜ್ ಶಿಗ್ಗಾವಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಹೊಯ್ಸಳ ಕಲಾ ತಂಡದ ಅಧ್ಯಕ್ಷ ಬಿ.ಎನ್.ಪುರುಷೋತ್ತಮ್(ಅಶೋಕ್), ಬೇಲೂರು ಐತಿಹಾಸಿಕ ಪ್ರಸಿದ್ದವಾದ ಪಟ್ಟಣ, ಇಲ್ಲಿ ಹೊಯ್ಸಳರ ಶಿಲ್ಪಕಲಾ ವೈಭವದ ವಿಕ್ಷಣೆಗೆ ದೇಶ-ವಿದೇಶದಿಂದ ಸಾವಿರಾರು ಪ್ರವಾಸಿಗರು ಬರುತ್ತಾರೆ. ಆದರೆ ಬೇಲೂರಿನಲ್ಲಿ ಹೊಯ್ಸಳರ ಕಾಲವನ್ನು ನೆನಪಿಸುವ ಯಾವ ವೃತ್ತವು ಇಲ್ಲ, ಈ ಹಿನ್ನೆಲೆಯಲ್ಲಿ ಜೆಪಿ ನಗರ ವೃತ್ತಕ್ಕೆ ಹೊಯ್ಸಳ ವೃತ್ತ ಎಂದು ನಾಮಕರಣ ಮಾಡುವ ಮೂಲಕ ಅವರನ್ನು ನೆನಪಿಸಿಕೊಳ್ಳಬೇಕೆಂದು ತಿಳಿಸಿದರು.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹೆಸರನ್ನು ನಾಮಕರಣ ಮಾಡುವುದಕ್ಕೆ ಅಕ್ಷೇಪಣೆ ಇಲ್ಲ, ಆವರು ಈ ದೇಶದ ಪ್ರಧಾನಿಯಾಗಿದ್ದವರು, ಬೇಲೂರು ಇನ್ನು ದೊಡ್ಡ ಮಟ್ಟದಲ್ಲಿ ಅಭಿವೃದ್ದಿ ಹೊಂದಬೇಕಾದ ಹಿನ್ನೆಲೆಯಲ್ಲಿ ದೇವೇಗೌಡ ರಸ್ತೆ, ದೇವೇಗೌಡ ನಗರ ಹಾಗೂ ದೇವೇಗೌಡ ವೃತ್ತ ಮಾಡಲು ಅವಕಾಶವಿದೆ ಎಂದರು.ಹೊಯ್ಸಳ ಕಲಾ ಸಂಘದ ಪಧಾಧಿಕಾರಿಗಳಾದ ಆನಂದ್, ಸಂದೇಶ ಹಾಗೂ ಜೆಪಿ ನಗರ ನಿವಾಸಿಗಳಾದ ರೇಣುಕಾಚಾರ್ಯ, ಉಮೇಶ್, ಚಂದ್ರಶೇಖರ್, ಮೂರ್ತಿ ಇನ್ನು ಮುಂತಾದವರು ಹಾಜರಿದ್ದರು.
► Follow us on – Facebook / Twitter / Google+